ಡೊಳ್ಳು ಹೊಟ್ಟೆ ಬೆನಕ
ಸಣ್ಣ ಇಲಿ ಯಾಕಪ್ಪ
ದೊಡ್ಡ ಕಿವಿ ಗಣಪ
ನಾ ಹೇಳೋದನ್ನ ಕೇಳಪ್ಪ
ಚೌತಿಯಂದು ಬಾರಪ್ಪ
ಚಕ್ಕುಲಿ ಉಂಡೆ ತಿನ್ನಪ್ಪ
ಮಿಸ್ಸಿಗೆ ಸ್ವಲ್ಪ ಹೇಳಪ್ಪ
ಹೋಂವರ್‍ಕ ಕಡಿಮೆ ಮಾಡ್ಸಪ್ಪ
ನಿನ್ನಯ ಬೆಲ್ಟು ನಾಗಪ್ಪ
ನಂಗೊಂದಿನ ಕೊಡಪ್ಪ
ಗಣಿತದ ಮಿಸ್ಸಿಗೆ ತೋರಿಸಿ
ಹೆದರಿಸಿ ಕೊಡ್ತೀನ್ ನನ್ನಪ್ಪ
ಬಾಲು ತರ್‍ತೀನಿ ಆಡಲು
ಬ್ಯಾಟು ನಿನ್ನ ಸೊಂಡಿಲು
ಬೌಲಿಂಗ್ ನಾನೆ ಮಾಡ್ತೀನಿ
ನೀ ಸಿಕ್ಸರ್ ಹೊಡೆಯೋದ್ ನೋಡ್ತೀನಿ.
*****