ಅಜ್ಜ ಅಜ್ಜಿ

ಬೋಳು ತಲೆ ಬೊಚ್ಚು ಬಾಯಿ
ಇದ್ದರೇನು ಅಜ್ಜಗೆ
ಪಾಠ ಕಲಿವ ಧಾಟಿ ಕಂಡು
ನಕ್ಕು ಬಿಡುವ ಮೆತ್ತಗೆ

ಬಿಳಿಯ ತಲೆ ಸುಕ್ಕು ತೊಗಲು
ಇದ್ದರೇನು ಅಜ್ಜಿಗೆ
ಎಲೆ ಅಡಿಕೆ ಜಜ್ಜಿ ಕೊಟ್ರೆ
ಮುತ್ತು ಕೊಡುವಳು ಕೆನ್ನೆಗೆ

ಮಂದ ಕಿವಿ ಮೈ ನಡುಕ
ಇದ್ದರೇನು ಅಜ್ಜಗೆ
ಅಚ್ಚು ಮೆಚ್ಚು ಕಥೆಯ ಹೇಳಿ
ಖುಷಿಯ ಕೊಡುವ ಮನಸಿಗೆ

ಬೆನ್ನು ಬಾಗಿ ಕೈಲಿ ಕೋಲು
ಇದ್ದರೇನು ಅಜ್ಜಿಗೆ
ನೇರವಾಗಿ ನಡೆವ ದಾರಿ
ತೋರುವಳು ನಮಗೆ

ಅಜ್ಜ ಅಜ್ಜಿ ಇಬ್ಬರು
ಮನೆಯ ಎರಡು ಕಣ್ಗಳು
ಅವರ ಪ್ರೀತಿ ತ್ಯಾಗವು
ನಮಗೆ ದಾರಿ ದೀಪವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಫಲ
Next post ತಾತಗೆ ಮೊಬೈಲ್ ಪಾಠ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…