ನಾನು ಹೂವು ಮಧುರ ಮಾವು
ನಾನು ಶಿವನ ಗಾನವು
ನಾನು ಅವನು ಕಬ್ಬು ಬಾಳೆ
ಅವನೆ ನನ್ನ ಪ್ರಾಣವು
ಮುಳ್ಳು ಇಲ್ಲ ಕಲ್ಲು ಇಲ್ಲ
ಬೆಟ್ಟವೆಲ್ಲ ಬೆಣ್ಣೆಯು
ಬಂಡೆಯೆಲ್ಲ ಉಣ್ಣೆ ಬಂಡೆ
ದೊಡ್ಡ ಬೆಲ್ಲ ಕಣ್ಣೆಯು
ಗಂಧ ಮರದ ಚಂದ ಗಾಳಿ
ನಮ್ಮ ಪ್ರೇಮ ಸಾರಿದೆ
ಚಂಡು ಹೂವು ದುಂಬಿ ದಂಡು
ನಮ್ಮ ಕೂಗಿ ಹಾಡಿದೆ
ಧನ್ಯ ಬೆಳಕು ಧನ್ಯ ಬಾಳು
ನೂರು ಧನ್ಯ ಹೂವಿಗೆ
ಮಾವು ತೆಂಗು ಧನ್ಯ ಧನ್ಯ
ಗೆಳೆಯ ನಕ್ಕ ನಾಡಿಗೆ
*****