ಸಗ್ಗದಿ… ಸಂಕ್ರಾಂತಿ
ಸಡಗರದಿ ಬರುತಿರೆ
ಸವಿಯ ಸಂಕೇತದಿ
ಎಳ್ಳು-ಸಕ್ಕರೆ ವಿನಿಮಯಿಸುತ್ತ
ಸಾಗೋಣ ಸರಸದಿ ಸೌಹಾರ್ದತೆಯಲಿ
ಮೇಲು-ಕೀಳು
ಭೇದಭಾವ ಮರೆತು
ಕ್ರಾಂತಿಯ ಸಂದೇಶ…
ಸಕಲರಿಗೂ ಸಾರುತಲಿ…
ಸಹಬಾಳ್ವೆಯಲಿ… ಸಾಗೋಣ.
ಜಲ-ನೆಲ-ಕಾಡಿನ
ರಕ್ಷಕರು ನಾವಾಗಿ
ಮೌಢ್ಯ.. ಸಂಪ್ರದಾಯಗಳ
ಸೆರೆಯಾಗದೆ… ನಾವುಗಳು
ನವೋದಯಕೆ ನಾಂದಿಯಾಗೋಣ
ಸಂಕ್ರಾಂತಿಯ ಸೌರಭದಿ
ಅರಳುತ ಬೆರೆಯೋಣ
ಶಾಂತಿ-ನೆಮ್ಮದಿ ಅಲೆಯು
ಎಲ್ಲೆಡೆ-ಹರಡುತ
ಸಮೃದ್ಧಿ-ಸಂಕೇತದಿ
ಸದಾ ಸಂಕ್ರಾಂತಿ ಬರುತಿರಲಿ
***