ಪ್ರೀತಿ ಒಂದು ಆಸರೆ

ಪ್ರೀತಿ ಒಂದು ಆಸರೆ
ಪ್ರೀತಿ ಒಂದು ನಂಬಿಕೆ|
ಪ್ರೀತಿ ಒಂದು ದೈವ
ಪ್ರೀತಿ ಒಂದು ಬೆಳಕು|
ಆ ಬೆಳಕಲಿ ಬಾಳ
ಹುಡುಕುವುದೇ ಬದುಕು||

ಪ್ರೀತಿಯಿದ್ದರೇನೇ ಜೀವನ
ಇಲ್ಲದಿರೆ ನೀರಸ ಯಾನ|
ಪ್ರೀತಿಯಿದ್ದರೇನೇ ಚೇತನ
ಇಲ್ಲದಿರೆ ಸ್ಮಶಾನಮೌನ||

ಪ್ರೀತಿ ಒಂದು ಮಧುರ
ಸುಮಧುರ ಜೀವತರಂಗ|
ಪ್ರೀತಿ ಒಂದು ಸುಂದರ
ಅನುಭೂತಿ ಅಂತರಂಗ|
ಪ್ರೀತಿ ಎಂದೂ ಆರದ ಜ್ಯೋತಿ
ಸದಾ ಹೊತ್ತಿಸುವ ಆರತಿ||

ಪ್ರೀತಿ ಒಂದು ತರಹ
ಪವಿತ್ರ ಗಂಗಾಸ್ನಾನ|
ಪ್ರೀತಿ ಒಲಿಯಿತೆಯಾದರೆ
ಅದು ಪೂರ್ಣಫಲ ಪ್ರಸಾಧನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಹಿಯಾದ ಶಿಕ್ಷೆ
Next post ಬಿಸಿಲು ಬೆಳದಿಂಗಳು

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…