ಆಗಾಗ ಭೂ ಕಂಪಗಳು ಯುದ್ಧಗಳು
ಸುನಾಮಿಗಳು ಮುಗಿಯದ ತಾಪ
ತ್ರಯಗಳು ಗೋಜು ಗೊಂದಲಗಳು
ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ
ಮಿಂಚು ಹುಳುಗಳು ದ್ವೀಪಗಳು
ಕಾಪಾಡ ಬಂದ ಹಡಗುಗಳು
ಸಿಡಿಸುತ್ತಿರುವ ಮತಾಪುಗಳು
ಅನವರತ ಸಾಗುವ ಈ ಪ್ರಯಾಣ
ಮುಗಿಯುವುದೇ ಇಲ್ಲ ಆಯಾಸ ಯಾನ
ನಡುನಡುವೆ ಈ ಮಧ್ಯಂತರ
ಸಾಕು ಕವಿತೆಗೆ ಈ ಅಂತರ
*****