ನೆರಿಗೆ ಸೀರೆಯುಟ್ಟ ನಾರಿ
ಚಂದ್ರ ಮೊಗದ ಪೋರಿ
ಬಂದು ನಿಲ್ಲು ಒಂದು ಸಾರಿ
ನಾ ಕೇಳುವೆ ನಿನ್ನ ಮಧುರ ವಾಣಿ.
ಸುಮದ ಹಾಗೆ ನಿನ್ನ ಮನ
ದುಂಬಿಯಾಗಿ ಗುಣಗಲೇನು?
ಮಧುವಿನಂತೆ ನಿನ್ನ ತನುವು
ಮಡಿಲಲಿ ಮಲಗಿ ಹೀರಲೇನು?
ಚಂದದಲಿ ನೀನು ಚಂದ
ವರ್ಣಿಸಲೇಕೆ ನಿನ್ನ ಅಂದ?
ಹಾಕದಿರು ಸಪ್ಪೆ ಮೋರೆ
ನೀನೋ ನಗುವ ತಾವರೆ.
*****