ತನುವೆಂಬ ಹುತ್ತಕ್ಕೆ ಮನವೆಂಬ
ಸರ್ಪ ಆವರಿಸಿ ಹೆಡೆ ಎತ್ತಿ ಆಡುತಿರಲು,
ಆ ಸರ್ಪನ ಕಂಡು ನಾ ಹೆದರಿಕೊಂಡು,
ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು,
ನೋಟ ನಿಂದಿತ್ತು, ಹೆಡೆ ಅಡಗಿತ್ತು,
ಗುರು ಕರುಣವೆಂಬ ಪರುಷವೆ ನಿಂದಿತ್ತು.
ನಿಂದ ಪರುಷವೆನ ಕೊಂಡು ನಿಜದಲ್ಲಿ
ನಿರ್ವಯಲಾಗುವ ಶರಣರ ಪಾದವ ನಂಬಿ
ಕೆಟ್ಟು ಬಟ್ಟಬಯಲಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ