ಮುದ್ದು ಮುದ್ದು ಗೋಪಾಲ
ಬಾರೋ ಶ್ರೀಕೃಷ್ಣಲೋಲ
ಸದ್ದು ಮಾಡದೆ ಕದ್ದು ಬಾರೋ
ಗೋಪಿಕೆಯರ ನಂದಕಿಶೋರ ||
ಬೆಣ್ಣೆಯ ಕದ್ದು
ಬಾಯಲ್ಲಿ ಇಟ್ಟು
ಗೆಳೆಯರ ಕೂಡಿ ಓಡಿ ಆಡಿ
ನಗುವ ಚಂದ್ರನಂತೆ
ನಗಿಸುವ ಬಾರೋ ||
ಮಣ್ಣನ್ನು ತಿಂದು
ಬಾಯಲ್ಲಿ ಅಂದು
ಬ್ರಹ್ಮಾಂಡವ ತೋರಿದ
ಬಾಲನೆ ನೀನು
ಚೆಂಡಾಟವ ನಾಡಿ
ಕಾಳಿಂಗನ ವಧಿಸಿದ
ನೀಲಮೇಘನೆ ಬಾರೋ ||
ಹೆಜ್ಜೆಯ ಹಾಕಿ
ಗೆಜ್ಜೆಯ ನಾದದಿ
ಘಲು ಘಳಿರ್ ಎನ್ನುತ್ತಾ
ಕುಣಿದು ನಲಿದ ಮೋಹನನೆ
ಯಶೋದೆಯ ನಂದ
ಮುಕುಂದನೇ ಕದ್ದು
ಮೆಲ್ಲನೆ ಬಾರೋ ||
*****