ಹಸಿರು ಬಳೆಯ ಹೊಗರು ಕಳೆಯ
ಚಂದ್ರ ಚಲುವ ಮೋಹಿನಿ
ಹೂವು ಮುಡಿಯ ಹಾವು ಜಡೆಯ
ಕೂಹು ಕೂಹು ಕಾಮಿನಿ ||೧||
ನೀನೆ ವೀಣೆ ನೀನೆ ಮೇಣೆ
ನೀನೆ ನೀನೆ ಕೋಮಲೆ
ತನನ ತನನ ಮನನ ಮನನ
ಕಾವ್ಯ ಮಾಲೆ ಊರ್ಮಿಳೆ ||೨||
ಯಾವ ಕನಸು ಯಾವ ಮನಸು
ತುಂಬಿ ತುಂಬಿ ತುಳುಕಿದೆ
ಕಾಲ ಕಾಲ ಕೂಗಿ ಕೂಗಿ
ತೂಗಿ ತೂಗಿ ಬೆಳೆದಿದೆ ||೩||
ನಿಲ್ಲು ಸಾಕು ಹುಲ್ಲು ಹಾವು
ವಿಶ್ವ ನಟನ ನಾಟಕಂ
ಹಳೆಯ ಧಾಟಿ ಘಾಟಿ ಫಾಟಿ
ತಗೋ ಮುಗಿಲ ರೂಪಕಂ ||೪||
*****