ಏಕೆ ? ಒಳಮನಸ ಮಾತ
ಕೇಳುತಿಲ್ಲ ನೀನು?|
ಕೇಳಿದರೆ ನಿನಗೆಲ್ಲಾ
ಒಳಿತೆಯೇ ಆಗವುದು|
ಕೇಳು ನೀನದರ ಮಾತ||
ಒಳಮನಸು ಪ್ರತಿ ಹಂತದಲ್ಲೂ
ನಿನ್ನನೆಚ್ಚೆರಿಸಿ ತಿಳಿಹೇಳುವುದು
ನೀನು ಮಾಡುತಿಹುದು
ಸರಿಯಲ್ಲವೆಂದು|
ನೀ ಸರಿಯಾದುದ ಮಾಡಿದರೆ
ಅದು ನಿನ್ನ ಆತ್ಮಬಲ ಹೆಚ್ಚಿಸುವುದು||
ಕೇಳು ನೀ ನಿನ್ನ ಒಳಮನಸ
ಗುರುವದುವೇ ನಿನಗೆ
ಕೇಳದ್ದಿದರೆ ಮುಂದೆ
ಪಶ್ಚಾತ್ತಾಪ ಪಡುವೆ|
ಬರೀ ಚತುರ ಬುದ್ದಿಯ
ಮಾತ ಕೇಳಿ ಹಿಗ್ಗಿ
ಹೆಮ್ಮೆ ಪಡುವುದು ತರವೆ|
ಹೃದಯದ ಮಾತನು ಕೇಳುತಿರು||
ಒಳಮನಸಿಗಿದೆ ಸತ್ಯವರಿಯವ ಯುಕ್ತಿ
ಒಳಮನಸಿಗಿದೆ ಸೂಕ್ಷ್ಮಾಸೂಕ್ಷಮತೆ ಶಕ್ತಿ|
ಧರ್ಮ ಅಧರ್ಮವನರಿಯುವ ಪರಿಣತೆ
ಒಳಮನಸು ಸದಾ ಅಜ್ಞಾನವ ಓಡಿಸುವ ಹಣತೆ
ಅದುವೇ ಮಹಾಜ್ಞಾನ ದಾರಿಯ ಪ್ರಣತೆ||
*****