ಬಾರೈ ಬಾರೈ ಹೋಳಿ ಕಾಮಾ

ಬಾರೈ ಬಾರೈ ಹೋಳಿ ಕಾಮಾ
ಹೋಳಿಗೆ ನಿನ್ನಾ ಮಾಡೂವೆ
ನಿನ್ನಾ ಕಾಳು ಬ್ಯಾಳಿ ಕುಚ್ಚಿ
ಯೋಗಾ ಬೆಲ್ಲಾ ಹಾಕೂವೆ

ರುಬ್ಬೀ ರುಬ್ಬೀ ಗುಬ್ಬಿ ಮಾಡಿ
ನಿನ್ನಾ ಹೂರ್‍ಣಾ ರುಬ್ಬೂವೆ
ಯೋಗಾ ಆಗ್ನಿ ಹಂಚು ಮಾಡಿ
ಬಿಸಿಬಿಸಿ ಹೋಳ್ಗೀ ಮಾಡೂವೆ

ಶಿವನೇ ಬಂದಾ ಎಂಥಾ ಚಂದಾ
ಹೋಳ್ಗೀ ತುಪ್ಪಾ ನೀಡಯ್ಯಾ
ಕಾಮನ ಹಬ್ಬಾ ತಿಪ್ಪರ ಲಾಗಾ
ರಾವಣ ಸೋಗೂ ಸಾಕಯ್ಯಾ

ಸತ್ತಾ ಕಾಮಾ ಸುತ್ತಾ ನಿಂತು
ಖುಶಿಖುಶಿ ಓಕ್ಳಿ ಉಗ್ಗೂವೆ
ಬಣ್ಣಾ ಗಿಣ್ಣಾ ಸುಣ್ಣಾ ಕಣ್ಣಾ
ಶಿವನಾ ಸುಗ್ಗೀ ಮಾಡೂವೆ

ಹೋಳ್ಗೀ ಉಣ್ಣೂ ಹೋಳೀ ಆಡು
ಸೈಸೈ ತತ್ತ್ವಾ ನೀ ಕಾಣು
ಹೋಳ್ಗೀ ಉಂಡು ಅಂಬ್ಲೀ ಯಾಕೊ
ಒಬ್ನೇ ಶಿವನಾ ನೀಕಾಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ ಗುಂಡಾಗಿದೆ ನಿಜತಾನೆ?
Next post ಆಸ್ಪತ್ರೆಯಲ್ಲಿ ಹತ್ತೂ ಸಮಸ್ತರು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…