“ಮೊಗ್ಗೆ! ಏಕೆ ಮೌನವಾಗಿರುವೆ?” ಎಂದು ಕೇಳಿತು ಒಂದು ಹೂವು. “ಅರಳಿದರೆ ನನ್ನ ಮುಗುಳು ನಗೆ ಬಿದ್ದು ಹೋಗುವದೆಂಬ ಭಯ” ಎಂದಿತು ಮೊಗ್ಗು.
“ನಿನ್ನ ಬೆನ್ನೇರುತ್ತಿರುವ ಕೀಟದ ಭಯ ನಿನಗಿಲ್ಲವೇ?” ಎಂದಿತು ಹೂವು. “ಹಾಗಿದ್ದರೆ ಅರಳಿ ಮುಗುಳು ನಗೆ ಜಗಕ್ಕೆ ಹಂಚಿ ಬಿಡುವುದೆ ಒಳಿತಲ್ಲವೇ?” ಎಂದಿತು ಮೊಗ್ಗು. “ನೀನು ಮಾನವನಂತೆ ಅಲ್ಲ ಅವರು ನಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ನಿಜವನ್ನು ಅರಿತು ಕೊಂಡು ಸಹಜತೆಯಿಂದ ಬೆಳಗು. ಹುಟ್ಟುವಾಗಲೆ ನೀ ನಕ್ಕು ಬಿಡು” ಎಂದು ಬೋಧಿಸಿತು ಹೂವು. “ಹೂಂ, ಹಾಗೇ ಮಾಡುವೆ” ಎಂದಿತು ಮೊಗ್ಗು.
*****