ಮಾಮರದ ಚಿಗುರಲ್ಲಿ
ರಾಗ ಮೂಡಿಸೋ ಪಿಕವೇ
ಮಧುರ ನುಡಿಯಲಿ ನಿನ್ನ
ರೂಪ ಗೌಣ
ಸಿಹಿಯ ಸತ್ವದ ಹೊತ್ತ
ಕರಿಯ ನೇರಳೆ ಹಣ್ಣೆ
ರುಚಿಯ ನೆಪದಲ್ಲಿ ನಿನ್ನ
ಬಣ್ಣ ಗೌಣ
ಮೂರ್ತಿಯಾಗಲು ಬಲ್ಲ
ಕರಿಯ ಕಲ್ಲಿನ ಬಂಡೆ
ಕಲೆಯ ಹೊಳಪಲಿ ನಿನ್ನ
ಕಾಠಿಣ್ಯ ಗೌಣ
ಶ್ರಮದ ಬಿಲ್ಲಗೆ ಒಲಿದ
ವಿಜಯ ಮಾಲೆಯ ಧರಿಸೆ
ಪಟ್ಟ ಪಾಡಿನ ಹಾದಿ
ದುರಿತ ಗೌಣ
ಬಾಹ್ಯ ಬದುಕಿನ
ಬಣ್ಣ ಬೆರಗು ಬಿನ್ನಾಣ
ಕೆಡದಿರೆ ಒಳಗಣ
ಸತ್ಯ ಗೌಣ