ಅರಿಯೆ ನಾನು; ದಾರಿ ತೋರೊ ಗುರುವರ
ಊರೂರು ತಿರುಗಿ ಕಣ್ಣೀರ ಕರೆದೆನು
ಆರಾರ ಗುರುತನ ದೊರೆಯಲಿಲ್ಲೋ ಹರ
ವರಗುರು ನೀನೆಂದರಿದು ನಾ ಬಂದೆನು
ನಿನ್ನರವಿನ ಅನುಭವಾಂಮ್ರತವನು
ಎನ್ನ ಬಳಲಿದುದರಕ್ಕೆ ಬಡಿಸು
ನಿನ್ನುಳಿದು ಮುನ್ನು ನನಗಿನ್ನೇನು ?
ನೀ ನನ್ನ ಅಖಿಳ ಜೀವನವ ನಡೆಸು
ಎಲ್ಲಲ್ಲೂ ತಿರುಗಿದೆನು ನಿನ್ನರಿಯದೆ
ಆವಾವ ಪರಿಯಲಿ ನಾ ಕಾಡಿ ಬಂದೆನು
ಎಲ್ಲದೆಶೆಯೊಳು ನಿನ್ನ ನರಸುತ ಕರೆದೆ
ಹಲುಬುತಿರಲು ಹೃದಯ; ನಿನ್ನ ನಾ ಕಂಡೆನು
ನಾ ನಿನ್ನ ಕಂಡೆನೊ, ನೀ ಎನ್ನ ಕಂಡೆಯೋ ?
ನಿನ್ನ ದ್ಭುತ ಲೀಲೆ ವೈಚಿತ್ರ್ಯವೋ?
ನಾ ಸಿಲುಕಿದುದು ನಿನ್ನದೇ ಬಲೆಯೋ
ಓ ನಿನ್ನ ಚಕ್ರ ತಿಳಿಯಲಸದಳವೋ
ಹರ ನೀನು, ಹರಿ ನೀನು, ಎಲ್ಲ ನೀನು
ಆ ಅಲ್ಲಾ ಬುದ್ಧ, ಏಸು ನೀನೆ ನೀನು
ಒಡಕು ತೊಡಕಾಗಿರುವ ಜಗವಿದೇನು ?
ನಾನರಿದಿಹೆನು ಸರ್ವ ರೂಪಿಯೇ ನೀನು
*****