ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲೆ ಹುಟ್ಟಿ ನದಿಯಾಗಿ ಹರಿದ ನಮ ಕಾವೇರಮ್ಮ ಮುನಿದಿಹಳು ಕನ್ನಡಿಗರ ಅಭಿಮಾನ ಶೂನ್ಯಕೆ ಅನ್ಯರ ಮನೆಯನು ಸೇರಿಹಳು ...

ರಮೇಶ ಕುಮಾರನ ಬೆನ್ನ ಮೇಲೆ ಒಂದು ದೊಡ್ಡ ಆಧುನಿಕ ಚೀಲ. ಅದು ಬೆನ್ನ ಮೇಲಿಂದ ಅತ್ತಿತ್ತ ಸರಿದಾಡದಂತೆ ಅದರ ಹಿಡಿಕೆಗಳು ಅವನ ಎರಡೂ ತೋಳುಗಳಿಗೇರಿದ್ದವು. ಏರ್ಪೋಟ್‌ನಿಂದ ಹೊರಬಂದ ಅವನು ಟ್ಯಾಕ್ಸಿ ಒಂದರಲ್ಲಿ ನೇರವಾಗಿ ಆಸ್ಪತ್ರೆಯ ಕಡೆ ಸಾಗಿದ. ಗೊಂದ...

ನುಡಿಯೊಳಗಣಾ ನಿನ್ನ ನುಡಿಯಲಿ ಕನ್ನಡತನವು ನಲಿವಾಗಿರಲಿ ಸದಾ ನಡೆಯೊಳಗಣಾ ನಿನ್ನ ನಡೆಯಲಿ ಕನ್ನಡತನವು ಹಸಿರುಸಿರಾಗಿರಲಿ ಸದಾ ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ ದುರಭಿಮಾನದ ಕೊಳೆಯ ತೊಳೆದೊಗೆದ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜೊತೆಯಲ್ಲೋದುವ ಖಾಸಾ ಗೆಳೆಯರಿಗೆ ಅನಿಸಿತ್ತು ಖ್ಯಾತನಾಗಿಯೆಬಿಡುವ ಈತ ಎಂದು. ಅವನೂ ಹಾಗೇ ತಿಳಿದ, ನಿಯಮ ಬಿಡದೇ ನಡೆದ, ಶ್ರಮಿಸುತ್ತಲೇ ಕಳೆದ ಹರೆಯವನ್ನು; ‘ಮತ್ತೇನು?’ ಹಾಡಿತು ಪ್ಲೇಟೋನ ಭೂತ, ‘ಮತ್ತೇನು, ಮತ್ತೇನು...

ಚಿನ್ನೂ, ಹಿತೈಷಿಗಳು, ಸ್ನೇಹಿತರು, ಹತ್ತಿರದಿಂದ ಬಲ್ಲವರು ನನ್ನ ಬದುಕು, ನಾನು ಬದುಕಿದ ರೀತಿಗೆ ಹೋರಾಟವೆಂದುಕೊಂಡಿದ್ದರು. ಅಂತಹುದ್ದೇನು ಇರಲಿಲ್ಲ. ಅವರವರ ಬದುಕು ಅವರವರಿಗೆ ಹೋರಾಟವೆಂದೇ ಭಾಸವಾಗುತ್ತದೆ. ನಾನು ಯುದ್ಧ ಮಾಡಿದ ವೀರಳಲ್ಲ, ಯಾವ ಸ...

ಬಂತು; ನಾಗರಪಂಚಮಿಯು ಬಂತು. ಮಳೆಗಾಲ- ವುಯ್ಯಾಲೆಯಾಡುತಿದೆ; ಜಿದ್ದಿನಲಿ ಹೂಬಿಸಿಲು ಎದ್ದು ಬಿದ್ದೇಳುತಿದೆ. ಸುತ್ತು ಹಚ್ಚನೆ ಹಸಿರು ನಿಂತು ತಲೆದೂಗುತಿದೆ, ಸವಿಸವಿದು ನೊರೆವಾಲ ಮಿಡಿನಾಗರವು ತೂಗುವಂದದಲಿ. ಇದು ಸಾಲ- ದೆನುವಂತೆ ಹಸುಮಕ್ಕಳೊಡನೆ ಹ...

ಎಂಥಾ ಸುಂದರ ಭಸ್ಮಾ ಥಳಥಳ ಥಳಥಳ ಭಸ್ಮಸ್ನಾನವ ಮಾಡಿದೆ ಬೂದಿ ಭಸ್ಮವ ಬಿಟ್ಟೆ ಜ್ಯೋತಿ ಭಸ್ಮವ ಹಿಡಿದೆ ಭಸ್ಮ ಸ್ನಾನವ ಮಾಡಿದೆ ಬೆಳಕು ತುಂಬಿದ ಭಸ್ಮ ಥಳಕು ಚಿಮ್ಮಿದ ಭಸ್ಮ ಜ್ಯೋತಿ ಸ್ನಾನವ ಮಾಡಿದೆ ಚಿದ್ಲಿಂಗ ಶಿವಯೋಗಿ ಲಕಲಕ ಹೊಳಿದಂತ ಜ್ಯೋತಿ ಸ್ನಾ...

೧೯೪೧ನೆಯ ಜುಲೈ ಸಂಚಿಕೆಯಲ್ಲಿ (ಸಂಪುಟ೧೯) ಜಯಕರ್ನಾಟಕ ಗ್ರಂಥಮಾಲೆಯ ಪ್ರಕಟಣೆಗಳು ಎಂಬ ಜಾಹೀರಾತಿನಲ್ಲಿ ಶ್ಯಾಮಲಾ ಅವರ ಕತೆಗಳ ಕುರಿತ ಪ್ರಕಟಣೆಯೊಂದು ಹೀಗಿದೆ: “ಜಯಕರ್ನಾಟಕ ಸಂಪಾದಿಕೆಯರಾದ ಶ್ರೀ.ಸೌ ಶ್ಯಾಮಲಾದೇವಿಯವರ ಕತೆಗಳ ಸಂಗ್ರಹ. ಕೆಲ...

ಮಡಿಕೇರೀಲಿ ರತ್ನ ಕಂಡಾ ವೊಸಾ ಮತ್ನ. ೧ ‘ಮಡಿಕೇರೀಲಿ ಮಡಿಕೆ ಯೆಂಡ ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’ ಅಂದಿ ರತ್ನ ಪಡಕಾನೇಗೆ ವೊಂಟಿ, ಬೆಟ್ಟದ ನೆತ್ತಿ ಮೇಗೆ ವೋಯ್ತಿದ್ದಂಗೆ ನಿಂತ! ಕಲ್ಲಾದಂಗೆ ಕುಂತ! ೨ ಸುತ್ತ ಸಾಯೋ ಬಿಸಿಲಿನ್ ಚಾಪೆ! ಅಲ್ಲಲ್...

ಅಡಿಗಳಿಂದಳೆದಾಡೆ ದಾರಿಯುದ್ದೋ ಉದ್ದ, ದಾರಿ ತೆರೆದವನಾರೊ ಬಲು ವಿಚಿತ್ರ! ಹೆಜ್ಜೆಯಲಿ ಹಿಗ್ಗಿರಲು, ಹಾದಿಯುದ್ದಕು ಸೊಗಸು, ಹೆಜ್ಜೆ ಬರೆದಿತು ಹಾದಿಯೆಂಬ ಚಿತ್ರ. ನೆಲದಗಲದಲ್ಲಿ ಅಗಲಿಕೆಗೆ ಇಂಬಿರಲಾಗಿ, ಅಗಲಿಕೆಯ ಕಳೆಯಲಿಹುದೊಂದೆ ಹಾದಿ; ಪ್ರಿಯನ ಬ...

1...89101112...110

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...