‘ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿಯನ್ನು ಯಾರೂ ಅಲ್ಲಗಳೆಯಲಾರರು. ಈ ಭಾಗವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ....

ಕೂಲಂಕಷದೋಳಾಲೋಚಿಸಲು ದೋಷವಿಲ್ಲದಿಹ ರಿಲ್ಲದಿರಲೆನಗೆ ಅವರಿವರ ದೋಷವೆಣಿಸುವ ಛಲವಿಲ್ಲವೆನ್ನನ್ನದಡಿ ನೆಲವು ಸ್ಪಂದಿಸಲದರ ಬಲವನು ಮೆರೆಸುವಾತುರದೊಳೆನ್ನ ಭಾಷೆಯು ಗೇಲಿ ಎನಿಸಿದೊಡೆನ್ನ ದೋಷವನಂತೆ ಮನ್ನಿಸಿರಿ – ವಿಜ್ಞಾನೇಶ್ವರಾ *****...

ನೀಡೆನೆಗೆ ವಾಣಿ ಕಣ್ಣ ಅರಿವುಗಣ್ಣ ನೋಡಿ ತಿಳಿದು ಆನಂದಿಸುವೆ ನಿನ್ನೆಜಮಾನನ ಸೃಷ್ಟಿಯ ಸೌಂದರ್ಯ ಹಾಡಿ ತಿಳಿಸುವೆ ನನ್ನ ಸಂಕುಲಕೆಲ್ಲ ಪ್ರೇಮ ಜೀವನ ಕಲೆಯ. *****...

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ...

ಮಂಜಿನ ಮರೆಗೆ ತಿಪ್ಪೆಯ ಒಳಗೆ ಹೂವೊಂದು ಅರಳಿತ್ತು ಮತ್ತನ ಮೈಯಿ ಕೆಂಪನೆ ಬಾಯಿ ಥರ ಥರ ನಡುಗಿತ್ತು ಕಣ್ಣಲಿ ಕಂಬನಿ ನುಣ್ಣನೆ ನಲ್ದನಿ ನಸುಕನು ಹರಿದಿತ್ತು ಯಾರದು ತಂದೆ? ಯಾರದು ತಾಯಿ? ಎಲ್ಲರ ಕೇಳಿತ್ತು ನಾಯಿಯ ಬೊಗಳು ಇರುವೆಯ ಸಾಲು ಕಂದನ ಮುತ್ತಿ...

ಅಧ್ಯಾಯ ೨೨  ಹೃದಯದ ಹಕ್ಕಿ ದನಿ ಎತ್ತಿ ಹಾಡಿತು! ಬೆಳಗ್ಗೆ ಟೀವಿ ನೋಡುತ್ತ ಎಲ್ಲರೊಂದಿಗೆ ತಿಂಡಿ ತಿನ್ನುತ್ತಿದ್ದ ಗಂಗಮ್ಮ ಇದ್ದಕ್ಕಿದ್ದಂತೆ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದಾಗ ಅಲ್ಲಿದ್ದವರೆಲ್ಲ ಗಾಬರಿಯಾದರು. ಬೇಗ ಬಂದಿದ್ದರಿಂದ ರಿತು ಅಲ್...

ವೇಣುವಿನ ನಾದ ಹೊಮ್ಮಿತು ನಾಭಿಯೊಳಗಿಂದ ಮೂಡಿದ್ದು ಅದೆಂಥಾ ಮೋಹನ್ಮೋಹ ಮಾರ್ದವದ ಕನಸುಗಳು ಕಾಡ ನೀರವತೆಯಲ್ಲೂ ಮುಗಿಲ ಮುಟ್ಟಿಬಂದವು ಬೆಂದ ನೆಲ ಪ್ರಫುಲ್ಲಿಸಿತು ಪರಿಮಳ ಪೂಸಿತು ಇಬ್ಬನಿಯೂ ತಂಪೆರೆಯಿತು ಮೌನದ್ವಾರ ತೆರೆದುಕೊಳ್ಳಲು ಧೀರ್ಘದಾಹದ ಗಂಟ...

ನಮ್ಮ ದೇಶದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಮಾತನಾಡದ ಮಂದಿಯೇ ಕಡಿಮೆ. ವರ್ಣಭೇದ, ಲಿಂಗಭೇದ ಗಳಿಂದ ಹಿಡಿದು ವಿತ್ತಭೇದದ ವರೆಗೆ ಅಸಮಾನತೆಯಲ್ಲಿ ಸಮಾನತೆ ಕಾಣುತ್ತಿರುವ ಈ ಪುಣ್ಯಭೂಮಿಯ ಪಾಡನ್ನು ತಿಳಿಯಬೇಕಾದರೆ ತುಳಿತಕ್ಕೊಳಗಾದವರನ್ನು ನೀನು ನೋಡಿದ...

1...6789

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...