ವೇಣುವಿನ ನಾದ ಹೊಮ್ಮಿತು
ನಾಭಿಯೊಳಗಿಂದ ಮೂಡಿದ್ದು
ಅದೆಂಥಾ ಮೋಹನ್ಮೋಹ
ಮಾರ್ದವದ ಕನಸುಗಳು
ಕಾಡ ನೀರವತೆಯಲ್ಲೂ
ಮುಗಿಲ ಮುಟ್ಟಿಬಂದವು
ಬೆಂದ ನೆಲ ಪ್ರಫುಲ್ಲಿಸಿತು
ಪರಿಮಳ ಪೂಸಿತು
ಇಬ್ಬನಿಯೂ ತಂಪೆರೆಯಿತು
ಮೌನದ್ವಾರ ತೆರೆದುಕೊಳ್ಳಲು
ಧೀರ್ಘದಾಹದ ಗಂಟಲು
ಬಿರಿಯಿತು
ತುಟಿಯಂಚ ಕೊನೆರಾಗ
ಉಲಿಯಿತು.
ಅರೇ ಅವ ನಿಲ್ಲಲೇ ಇಲ್ಲ
ಮೋಹದ ಪರದೆಗೆ ನವಿಲುಗರಿ ಸಿಕ್ಕಿಸಿ.
ಸುಳಿಗಾಳಿಯಂತೆ ಸರ್ರನೇ
ಹೊರಟೇ ಹೋದ.
*****