ಹೂವಿನ ನಿಷ್ಠೆ
ಜನನದಲ್ಲಿ ಮರಣದಲ್ಲಿ ಹೂವು ಜತೆಯಾಗುವುದು ಸಂತೋಷದಲ್ಲಿ ದುಃಖದಲ್ಲಿ ಹೂವು ಭಾಗಿಯಾಗುವುದು ಮಿಕ್ಕವರು ಮರಳಿದರೂ ಮಸಣದಲ್ಲಿ ಹೂವು ಉಳಿದೇ ಉಳಿಯುವುದು ಆಳಿದವನ ಆತ್ಮವನ್ನು ಪರಮಾತ್ಮನೆಡೆ ಕೊಂಡೊಯ್ಯುವುದು. *****
Read More