ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ ಕಂಠವ ಮಳೆಯು ಗುಳುಗುಳು ನಗಿಸಲಿ ||೨|| ಬಿಲ್ವ ಬಳುವಲ ಮಲೆಯು ಬೆಳವಳ ಹ...

ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ “ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ” ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮ...

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು || ಗು...

ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ… ಇಲ್ಲಿ ಬ್ರಹ್ಮಚಾರಿಯಾಗಿ ನಾ...

ಫ್ರಿಜ್‌ನಲ್ಲಿಟ್ಟ ಯಾವುದೇ ಪದಾರ್ಥಗಳು ತಾಜಾತನವಾಗಿದ್ದರೂ ಸ್ವಾದ ಅಥವಾ ರುಚಿಯನ್ನು ಕಳೆದುಕೊಳ್ಳುತ್ತಿರುವುದು ಮಾಮೂಲಿ ಸಂಗತಿ. ತಾಜಾತನವಿದ್ದರೆ ರುಚಿ ಮತು ಸ್ವಾದದಿಂದ ಈ ತಂಗಳು ಪೆಟ್ಟಿಗೆಯಲ್ಲಿಟ್ಟ ಪದಾರ್ಥಗಳಿರಬೇಕೆಂದು ಇದರ ತಯಾರಕರು ಮನಗಂಡರ...

ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...

ನೀಗಿ… ನೀಗಿ… ನೀಗಿ… ನನ್ನ ನೀನು, ನಿನ್ನ ನಾನು ಕಂಡರಾಗದಂತ ಸಣ್ಣತನವ ನೀಗಿ. ನಿನ್ನ ಕೈಯ ನಾನು ಹಿಡಿವೆ ನೀನು ಹಿಡಿ ಇನ್ನೊಬ್ಬರ ಹೀಗೆ ಮುಂದೆ ಸಾಗುವ ಬದುಕಿನಲ್ಲಿ ಪ್ರೀತಿ ಕಾಣುವ. ಏನೇ ಎಡರು ತೊಡರು ಬರಲಿ ಕೂಡಿ ಬದುಕುವ ನನ...

ಹೆಣ್ಣು ನಾಯಿ ಆಗಲೇ ಕೊಂದರು ಮರಿಗಳಿನ್ನೂ ಉಳಿದಿವೆ – ಜನಪ್ರಿಯ ಗೀತೆ ‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’ ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ ತಲುಪಿತು....

ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ ಹಾರಿಕೊಂಡಿರುವೆ ನೀಲ ಗಗನದೊಳಗೆ ಸೂರ್ಯ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...