ಈ ಮುಸ್ಸಂಜೆಯಲಿ ಮೃದುವಾಗಿ ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ ಮಗುವಾಗಿ ಅತ್ತ ದಿವಸಗಳ ಮರೆತರೆ ಹಕ್ಕಿ ಹಾಡು ಎದೆಗಿಳಿಯುವದಿಲ್ಲ ತಾಯ ಹಾಡು ಆಕಾಶಗಂಗೆಯ ಬಿಳಿ ಹಾದಿಯಾಗುವದಿಲ್ಲ....
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು. ಈ ಹದಿನೈದು ದಿನ ನನ್ನ ಮನಸ್ಸು...
ಒಂದನ್ನೊಂದು ಅಣಕಿಸುವಂತಿವೆ ಅವು! ಅದೇ ಮೈ ಅದೇ ಬಣ್ಣ ಅದೇ ನಿಲುವು ಅದೇ ಬಾಲದ ಅದೇ ಡೊಂಕು ಕಣ್ಣುಗಳಲ್ಲೂ ಅದೇ ಕವಿದ ಮಂಕು ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು...
ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ. ನೀರವತೆಯಲ್ಲಿ...