Month: April 2018

ಕನಸು

ದಿನಾಲೂ ನೋಡುತ್ತಲೇ ಇದೆ ಆ ಮಗು ಪಾಪ ನೆಲದೆದೆಯಿಂದ ಆಕಾಶದಂಗಳಕೆ ನೆಗೆಯುವ ವಿಮಾನ ಹಾರಾಡಿ ದೂರ ದೂರ ಸರಿಯುವದ- ನೂರಾರು ಕನಸುಗಳು ಚಿತ್ತದೊಳಗೆ ಹಾರಲು ಹಾತೊರಿಕೆ. ಅನಕ್ಷರ, […]

ಮಕ್ಕಳಾಟ

ದಿನಕ್ಕೊಂದು ಆಟ ಮರದ ತುಂಬ ಮಿಡಿ ಮಿಡಿತದ ಹಕ್ಕಿ ಹಾರಾಟ ಗಾಳಿ ಮಾತು ಹೊಳೆದಾಟಿ ಬೇಲಿದಾಟಿ ಹಿಡಿದ ಚಿಟ್ಟೆ ಕೈಗೆ ಅಂಟದ ಬಣ್ಣಗಳು ಆಚೆ ಕಾಮನ ಬಿಲ್ಲು. […]

ರಾಧೆಯ ಸ್ವಗತ

ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: “ರಾಧೆ, ಈ […]

ಚಕ್ಕೆ

ಹರಿತ ಶಕ್ತಿಯ ಕೊಡಲಿಯ ಬಾಯಿಗೆ ಸಿಕ್ಕು ಅಲ್ಲಲ್ಲಿ ಸೆಕ್ಕಗಳೆದ್ದು ಚಿಮ್ಮಿದಾಗ… ವಾಸ್ತವಿಕತೆಯ ಮರೆತು ಅದರೊಳಗೆ ಒಂದಾದ ಬರಿ ಊಹೆಯ ಚಿತ್ರ. *****

ವಾಸ್ತವತೆ

ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ […]

ವಿದಾಯ

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು […]

ಸೂಜಿ ಹುಡುಕುವ ಅಜ್ಜಿ

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ […]

ನನ್ನ ಸ್ನೇಹಿತ

ಮೊದಲು ಅವನು ಅದನ್ನು ಕುಡಿದ ಈಗ ಅದು ಅವನನ್ನು ತಿನ್ನುತ್ತಿದೆ ಮಂಜಾವಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾವಿನವರೆಗೆ ಸದಾ ಕುಡಿಯುತ್ತಲೇ ಇದ್ದ ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ ಹರಸಾಹಸವೆಲ್ಲ […]