ನಿನ್ನೆದೆಯ ದನಿಯ ಖುಷಿ

ನಿನ್ನೆದೆಯ ದನಿಯ ಖುಷಿ

ಪ್ರಿಯ ಸಖಿ, ಬಹಳಷ್ಟು ಸಂದರ್ಭಗಳಲ್ಲಿ ಧರ್ಮ-ಶಾಸ್ತ್ರಕ್ಕೆ ಎದುರಾಗಿ ಮೌಲ್ಯ, ಮಾನವೀಯತೆಯ ನಂಬುಗೆಗಳು ಬಂದಾಗ ಯಾವದು ಸರಿ ? ಯಾವುದು ತಪ್ಪು ಎಂದು ಗೊಂದಲಕ್ಕೊಳಗಾಗುತ್ತೇವೆ. ಇಂತಹ ಸಂದರ್ಭದಲ್ಲೇ ಕವಿ ಕುವೆಂಪು ಅವರ ‘ಯಾವ ಕಾಲದ ಶಾಸ್ತ್ರವೇನು...

ಶಿವನಿಗ್ಯಾಕೆ ಮೂರ್‍ ಕಣ್ಣು?

"ಶಿವನಿಗ್ಯಾಕೆ ಮೂರ್‍ ಕಣ್ಣು?" "ಅವನು ದೇವ್ರಲ್ವ?" "ಲಕ್ಷ್ಮೀಗ್ಯಾಕೆ ಅಷ್ಟೊಂದು ಕಯ್?" "ಅವಳೂ ದೇವ್ರಲ್ವ?" "ಬ್ರಹ್ಮಂಗ್ ನಾಕ್‌ತಲೆ ಯಾಕಮ್ಮ?" "ವಿಷ್ಣೂ ಮಗನಲ್ವ?" "ಹಾವು ವಿಷ್ಣೂನ್ ಕಚ್ಚೊಲ್ವ?" "ಛೀ ಹೋಗೋ ಬಿಡುವಿಲ್ಲ" "ಹೋಗೇ ಅಮ್ಮ ಸುಮ್ನೆ ಬಯ್ತಿ...

ಎಳೆದೂ, ಎಳೆದೂ ಇರುಳು

ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ.... ಭರವಸೆ ಒಂದೂ ಇಲ್ಲ; ಅಂಜಿಕೆ...

ಸೂರ್ಯಾಸ್ತಮಾನ ಸಮಯ

ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ?  ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದಲಿ ನೀರು...

ಲಿಂಗಮ್ಮನ ವಚನಗಳು – ೨೩

ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು....

ಮಳೆ ಎಂದರೆ ಪ್ರೀತಿ ನನಗೆ

ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ - ಸತ್ತ...

ಸೌಂದರ್ಯಕ್ಕೆ

ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ...

ಬೆಳಗದಿರುವುದೇ

ಪ್ರಿಯ ಸಖಿ, ನನ್ನಿಂದೇನು ಸಾಧ್ಯ ? "ನಾನು ಅತ್ಯಂತ ನಿಕೃಷ್ಟ ಜೀವಿ" ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್....

ಅಜ್ಜಿ ನಂಗೆ ಇಷ್ಟ

ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ ಬರ್‍ಲೇ ಬಿಡ್ತಾಳಜ್ಜಿ ಕಥೆ ಹೇಳ್ತಾ ಕಡೇಲಿ!...

ನನ್ ಚಿನ್ನ

"ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ? ಪರದಾಟ ಸಾಕಿನ್ನು, ಮಹರಾಯ! ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,- ನಿನ್ನ ಮನೆಯಾಳಲ್ಲ ಸ್ವಾಮಿ !" ಎರಡರಲಿ ಒಂದೇನೊ ಆಳಾಗಿ ಇರಬೇಕು, ನನ್ನ ಚಿನ್ನಾ, ಓ ನನ್ನ...