ಲಿಂಗಮ್ಮನ ವಚನಗಳು – ೪೭

ನಿರಾಳ ಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು. ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು. ತನುವಿನಲ್ಲಿ ಮರಹಿಲ್ಲದಿರಬೇಕು. ಕಾಳಿಕೆ ಹೋಗದಿರಬೇಕು. ಇಂತು ನಿಶ್ಚಿಂತವಾಗಿ, ಚಿತ್ತಾರದ ಬಾಗಿಲವ ತೆರೆದು, ಮುತ್ತುಮಾಣಿಕ ನವರತ್ನ ತೆತ್ತಿಸಿದಂತಿರುವ ಮೇಗಳ ಶಿವಾಲಯವ ಕಂಡು,...

ಲಿಂಗಮ್ಮನ ವಚನಗಳು – ೪೬

ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದುಗನವ ಕಂಡಿಹೆನೆಂಬ ಅಣ್ಣಗಳಿರಾ ನೀವು ಕೇಳೀರೋ, ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ, ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ, ಘನವ ಕಾಣಬಾರದು ನಮ್ಮ...

ಲಿಂಗಮ್ಮನ ವಚನಗಳು – ೪೫

ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು,...

ಲಿಂಗಮ್ಮನ ವಚನಗಳು – ೪೪

ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಅರಸಿಂಗೆ ನೋಟ ಬೇಟದವರಿಬ್ಬರು. ಅಟ್ಟು ಮಣಿಹ ಹರಿಮಣಿಹದವರು. ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ. ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು, ಪುರವನೇರಿ, ನಿಶ್ಚಿಂತವಾಗಿ, ನಿಜದಲ್ಲಿ...

ಲಿಂಗಮ್ಮನ ವಚನಗಳು – ೪೩

ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ...

ಲಿಂಗಮ್ಮನ ವಚನಗಳು – ೪೨

ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ....

ಲಿಂಗಮ್ಮನ ವಚನಗಳು – ೪೧

ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು...

ಲಿಂಗಮ್ಮನ ವಚನಗಳು – ೪೦

ಅಯ್ಯ ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದರೆ, ಮರವೆಗೆ ಮುಂದು ಮಾಡಿತ್ತು. ಕರ್ಮಕ್ಕೆ ಗುರಿ ಮಾಡಿತ್ತು. ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣುಗಾಣದ...

ಲಿಂಗಮ್ಮನ ವಚನಗಳು – ೩೯

ಅಯ್ಯ ಅದೇನು ಕಾರಣವೆಂದರೆ, ಕಂಗಳ ಕತ್ತಲೆಯನೆ ಹರಿಸಿದಿರಿ. ಮನದ ಕಾಳಿಕೆಯನೆ ಹಿಂಗಿಸಿದಿರಿ. ಮಾತಿನ ಮೊದಲನೆ ಹರಿದಿರಿ. ಜ್ಯೋತಿಯ ಬೆಳಗ ತೋರಿದಿರಿ. ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ ವಿವೇಕಿಯ ಮಾಡಿ ನಿಮ್ಮ ಪಾದದಲ್ಲಿ ಏಕವಾದ...

ಲಿಂಗಮ್ಮನ ವಚನಗಳು – ೩೮

ಅಯ್ಯ ನಾ ಕಾಂಬುದಕ್ಕೆ ನನ್ನ ಶಕ್ತಿಯಿಲ್ಲ. ನಿಮ್ಮಿಂದವೆ ಕಂಡೆನಯ್ಯ.  ಅದೇನು ಕಾರಣವೆಂದರೆ, ತನುವ ತೋರಿದಿರಿ, ಮನವ ತೋರಿದಿರಿ, ಧನವ ತೋರಿದಿರಿ, ತನುವ ಗುರುವಿಗಿತ್ತು, ಮನವ ಲಿಂಗಕಿತ್ತು, ಧನವ ಜಂಗಮಕಿತ್ತು, ಇವೆಲ್ಲವು ನಿಮ್ಮೊಡವೆ ಎಂದು ನಿಮಗಿತ್ತು,...