ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು.
ಅರಸಿಂಗೆ ನೋಟ ಬೇಟದವರಿಬ್ಬರು.
ಅಟ್ಟು ಮಣಿಹ ಹರಿಮಣಿಹದವರು.
ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ.
ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ,
ಅರಸಿನ ಗೊತ್ತುವಿಡಿದು, ಪುರವನೇರಿ,
ನಿಶ್ಚಿಂತವಾಗಿ, ನಿಜದಲ್ಲಿ ನಿರ್ವಯಲನೆಯ್ದುವ
ಶರಣರ ಪಾದವ ಹಿಡಿದು, ಎತ್ತ ಹೋದೆನೆಂದರಿಯೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ