Home / ಕವನ / ಕವಿತೆ

ಕವಿತೆ

ತಿಂಗಳ ಬೆಳಕು ಚೆಲ್ಲಿದ ಹಾಗೆ ಅಂಗಳ ತುಂಬ ಮಲ್ಲಿಗೆ ಹಾಗೆ ಬಾ ನೀನು ನನ್ನ ಬಳಿಗೆ ಇರು ನನ್ನ ಒಟ್ಚಿಗೆ ಮಂಜು ನೆಲವ ತೊಯ್ದ ಹಾಗೆ ಸಂಜೆ ಗಾಳಿ ಸುಯ್ದ ಹಾಗೆ ಬಾ ನೀನು ನನ್ನ ಬಳಿಗೆ ಇರು ನನ್ನ ಒಟ್ಟಿಗೆ ಹಾಡಿನೊಳಗೆ ಇಂಪಿನ ಹಾಗೆ ಕಾಡಿನೊಳಗೆ ಕಂಪಿನ ಹ...

ಮೆಲ್ಲ ಮೆಲ್ಲ ಬರುವ ನಲ್ಲ ಬಾಲೆ ಜಡೆಯ ಬಾಚಿಕೊ ||ಪಲ್ಲ|| ಅವನು ಬರುವ ಬಂದೆ ಬರುವ ಏನು ತರುವ ನೋಡಿಕೊ ನಿನ್ನ ಮುಡಿಯ ಉಡಿಯ ನಡೆಯ ನಿನಗೆ ನೀನೆ ಮಾಡಿಕೊ ||೧|| ಮಧುರ ಗಲ್ಲ ಬೆವರ ದಂತೆ ಗಂಧ ಲೇಪ ತೀಡಿಕೊ ತುಟಿಯ ರಂಗು ತೀರದಂತೆ ರಸದ ರಂಗು ತುಂಬಿಕೊ...

ಬಾರೋ ವಸಂತ ಬಾರೋ || ಬರಿದಾದ ಈ ಮನಕೆ ಮುದವ ನೀ ನೀಡಲು| ಬಾರೋ ವಸಂತ ಬಾರೋ ಈ ವಸುಂಧರೆಯ ನವ ವಧುವಾಗಿಸೆ ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ|| ಕಾದಿರುವೆ ನಿನಗಾಗೆ ಹಂದರವ ಅಣಿಮಾಡಿ| ಆಲಿಸಲು ಕುಳಿತಿರುವೆ ಕೋಗಿಲೆಯ ಗಾನ ಇಂಚರವ, ಹೂ ದುಂಭಿಗಳ ಝ...

ಆ ಹಕ್ಕಿ ಈ ಹಕ್ಕಿ ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ ಮೊದಲ ನೋಟದ ಮಾತ್ರದಲಿ ಮನಸು ಕೊಟ್ಟುಕೊಂಡು ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ ಕನಸನ್ನು ಕಾಣುತ್ತ ಸಂಭ್ರಮದಿ ಓಲಾಡತೊಡಗಿದ್ದವು. ಮತ್ತೊಂದು ತಿರುವಿನಲಿ ಮುನಿದ ಪರಿಸರದೆದುರು ಜೀವದಾಟವು...

ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ ತುಂಬಿದ ಸಂಸಾರ ಹೆಣ್ಣು...

ನಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ. ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ ಮಲ್ಲಿಗೆ ಅರಳಿಸುತ್ತಾಳೆ. ‘ಅಮ್ಮಾ,, ಬಸಳೇ ಸೊಪ್ಪು ತಂದಿ, ಏಗಟ್ಟೇ ಮುರ್‍ಕಂಡ ಬಂದಿನ್ರಾ ತಾಜಾನೇ ಇತು.. ಬರ್ರಾ ಬ್ಯಾಗೆ, ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕ...

ಎದ್ದು ಬಾರಯ್ಯ ರಂಗ ಎದ್ದು ಬಾರಯ್ಯ ಕೃಷ್ಣ ಎದ್ದು ಬಂದು ನಿನ್ನ ಮುದ್ದು ಮೊಗವ ತೋರೋ | ಹಾಲ ಕಡಲ ಮಥಿಸಿ ಮಜ್ಜನ ಮಾಡಿಸಿ ನಿನ್ನ ಗಂಧವ ತೇದು ಪೂಸಿ ತುಳಸಿಮಾಲೆ ಕೊರಳೊಲು ಶೃಂಗಾರ ಮಾಡುವರೋ ರಂಗ || ಮುದ್ದು ಮೊಗಕೆ ನಿನ್ನ ಮುತ್ತನ್ನು ಕೊಟ್ಟು ದೃಷ್...

“ದೇವರೆಂದರೇನು ಅಜ್ಜ, ದೇವರೆಂದರೇನು ? ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ” “ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು, ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು, ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ. ಏಸ...

ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ ಕೊಡುವೆಯ ಚಿನ್ನದ ಬಳೆಯ ಚಿನ್ನದ ಬಳೆಗಳು ನೂರು ಕುದುರೆಗಳೆಳೆಯುವ ತೇರು ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ...

ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...