Home / ಕವನ / ಕವಿತೆ

ಕವಿತೆ

ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ ಬುದ್ಧ ಕಂಡ...

ಭೂತಾ ಬಂದಾವು ನೋಡಿರೇ ಮನಶಾರ ಕೂತಾ ತಿಂದಾವು ನೋಡಿರೇ ||ಪಲ್ಲ|| ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ ರಾಳ ಕಣ್ಣಿನ ಭೂತ ಬಂದಾವೇ ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ ಕಂಠ ಪಟ್ಟಿಯ ಭೂತ ಬಂದಾವೇ ||೧|| ಹುಬ್ಬಳ್ಳಿ ಹೆಬ್ಬಳ್ಳಿ ಕಬ್ಬಳ್ಳಿ ಮುಳಗಳ್...

ಸಿಕ್ಕೀತು ಹೇಗೆ ಕರ್ಣನಿಗೆ ಈ ನಾಡ ಸಿಂಹಾಸನ! ಹೆತ್ತ ತಾಯಿಯೆ ತೇಲಿಬಿಟ್ಟಳು- ನೀರ ಮೇಲಿನ ಪಯಣ. ಮೀನುಗಳು ಮುತ್ತಿಟ್ಟವು ಮೊಸಳೆಗಳು ಮುಟ್ಟವು ಅಲೆಯ ಮೇಲಿನ ಬಾಳು ಆಸೆಗಳು ಹುಟ್ಟವು. ಒಬ್ಬನಿಗೆ ಹೃದಯಕಳಶ ಇನ್ನೊಬ್ಬನಿಗೆ ಮೈಯ ಕವಚ ಕರ್ಣಕುಂಡಲಕ್ಕೂ ...

ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿ...

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ ! ಒಂದು ಸಾರಿ ದನಿಗೂಡಿಸಯ್ಯ ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ. ನೋಡಿದ್ದೆ ಒಂದು ಕ್ಷಣದ ಹಿಂದೆ ಇಲ್ಲಿಯೇ ಇದ್ದೆ ಓಣಿಯ ಹುಡುಗರ ಸಂಗಡ ಚಿನ್ನಾಟವಾಡುತ್ತಾ ಕಣ್ಮನ ತುಂಬಿದ್ದೆ. ಎಳೆವೆಯ ಸೆಳೆವಿನಲಿ ಇಲ್ಲಿಯೇ...

ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತ...

ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು ಸರಿಯೇನು || ನಿನ್ನೊಲುಮೆ ಇಲ್ಲದೆ ಬಾಡದ ಹೂ ಬಾಡಿದರೆ ...

ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ. ಸುತ್ತಲ ನ...

ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು ಮೊರೆಯುತಿದೆ ಕಡಲು ಕರೆಯುತಿದೆ ...

ಅಹೋ ನಕ್ಕ ಬೀಸಿ ಪಕ್ಕ ಗಗನ ದೇವ ಬಂದನು ನಗೆಯ ದೇವ ಹೊಗೆಯ ಮಾವ ಮಗಿಯ ತುಳಿದು ನಿಂದನು ||೧|| ಮುಗಿಲ ತುಂಬ ಬೆಳಗು ತುಂಬಿ ಬೆಳ್ಳಿ ಬಗರಿ ಬೀಸಿತು ನೆಲದ ತುಂಬ ಹಸಿರು ನಂಬಿ ತೆಂಗು ಲಾಗ ಹಾಕಿತು ||೨|| ಆಕೋ ಗುಡುಗು ಇಕೊ ದಿಡುಗು ಎದೆಯ ಡಬರಿ ಒಡೆಯಿ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...