ಅದೇ ಮುಗಿಲಿದೆ

ಅದೇ ಮುಗಿಲಿದೆ
ಅದೇ ದಿಗಿಲಿದೆ
ಅಂದಿಗು ಇಂದಿಗು ಇದೇ
ಇಂದಿಗು ಎಂದಿಗು ಅದೇ

ಬೆಳಕು ಮೂಡುತಿದೆ
ಬೆಳಕು ಮಾಯುತಿದೆ
ಹಗಲು ರಾತ್ರಿಗಳ ಹೊಸೆಯುತಿದೆ
ಹೂವು ಬಿರಿಯುತಿದೆ
ಹೂವು ಬೀಳುತಿದೆ
ಬೀಜ ಬೇರುಗಳ ಹೊಸೆಯುತಿದೆ

ಕಡಲು ಮೊರೆಯುತಿದೆ
ಕಡಲು ಕರೆಯುತಿದೆ
ದೂರ ತೀರಗಳ ತೊಯ್ಯುತಿದೆ
ಒಡಲು ಕುಣಿಯುತಿದೆ
ಒಡಲು ದಣಿಯುತಿದೆ
ಬೇರೆ ಮಡಿಲುಗಳ ಹುಡುಕುತಿದೆ

ಯುಗವು ಉರುಳುತಿದೆ
ಯುಗವು ಮರಳುತಿದೆ
ಆದಿ‌ಅಂತ್ಯಗಳನಳೆಯುತಿದೆ
ಜಗವು ಸರಿಯುತಿದೆ
ಜಗವು ತೆರೆಯುತಿದೆ
ಬಗೆಯಲಳವಿಗೆ ಮೀರುತಿದೆ

ಅದೇ ಮುಗಿಲಿದೆ
ಅದೇ ದಿಗಿಲಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೇಲ್
Next post ಕದೀಮ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…