ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ ಓ ಪ್ರೇಮ ಯುಗಶಿಲ್ಪಿ ದೇವದೇವಾ ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ ಕೇಳು ಮಕ್ಕಳ ಕೂಗು ವಿಶ್ವದೇವಾ ತಾಯಿಯೆಂದರು ನೀನೆ ತಂದೆಯೆಂದರು ನೀನೆ ನೀನಿಲ್ಲದಿನ್ನಾರು ಇಲ್ಲವಯ್ಯಾ ನೀನೆ ಮೌನದ ಮೌನ ನೀನೆ ಭುವನ...

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...

ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು; ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು; ಇನ್ನುವೂ ಹೂತಿಲ್ಲ ಮನದ ಮೊಗ್ಗು. ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆ...

ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು – ವಿಜ್ಞಾನೇಶ್ವರಾ *****...

ಸುತ್ತೇಳು ಸಂದ್ರ ಬಾಲೀ ಸುತ್ತಿಗೆ ಬಾರೆ ಕೋಲೇ ಮಾದೊಡ್ಡ ದರಿಯಾ ಮುಂದೆ ಆಡಿ ಬಾರ ಕೋಲೇ || ೧ || ಸರಣೂ ಸರಣೂ ಸರಣಂಬು ಸಾಮಿಗೆ ಗಂಗೇಯ ದೇವರಿಗೆ ಸರಣಂಬುದಾ || ೨ || ಸರಣೂ ಸರಣೂ ಸರಣಂಬು ಸಾಮಿಗೆ ಹಿಂದೀನ ದೇವರಿಗೆ ಸರಣಂಬುರಾ || ೩ || ವಳಗಿದ್ದ ಮ...

ಓ ನನ್ನ ಪ್ರಿಯ ರಾಧೆ ಕಾಂತ ನಿನಗಾಗಿ ನಿತ್ಯ ರೋದಿಸುತ್ತಿರುವೆ ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ ಬೇಡವೆಂದು ನಾ ವಿರೋಧಿಸುತ್ತಿರುವೆ ಕೃಷ್ಣ ನನ್ನಲೇನು ದೋಷ ಕಂಡೆಯೆ ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ ನಾನೇನು ಮಾಡಲಾಗದ ಪಾಪಿಯೇ ಮತ್ತೇಕೆ ನಿನ್ನರ...

ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ ಕಲಸಿದ ಮಂಡಕ್ಕಿ ಎಳ್ಳುಂಡೆ ಗುಳ್ಳುಂಡ...

ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು ದುಡಿದು ದುಡಿದು ಸವೆದು ಹೋದ ದೇಹಗಳು ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು ಉಸಿರುಗಟ್ಟಿಸುವ ನಿಯಮಗಳು ನಡುವೆ ಸಮಾಧಿಯಾದ ಬದುಕು. ಗೋಡೆಯಾಚೆ ತೂಗುತ್ತಿದೆ ನೋಡ...

1...9495969798...898

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...