ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು ನಮ್ಮ ನೆಚ್ಚಿ ಬರುವಂತೆ ನೋವು ಸಹ ಸದಾ ಸುತ...

ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ ಎನ್ನ ಮನವಿದುನ್ನತದ ಸಾವಯವದೊಳಿರಲಿ ಏನ ಮಾಡದಂತಿರಲಾಗದಾ ಸಂಕಟಕೆ ಏನೇನೊ ಮಾಳ್ಪುದನು ತಡೆವೊಡೆನ್ನ ಮನ ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ – ವಿಜ್ಞಾನೇಶ್ವರಾ *****...

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು … ಕೆಟ್ಟದ್ದು ಪುಸಕ್ಕನೆ ಕಣ್ಣಿ ಹರಿದ ದನದಂತೆ ಹಾರಿ ತನ್ನದೇಯೆಂಬಂತೆ ಮನಸ್ವಿ ಅನುಭವ...

ಕಿಕ್ಕಿರಿದಿದ್ದವು ಮರದಲ್ಲಿ ಹೂವುಗಳು ಇಡೀ ಮರವು ಒಂದು ಹೂವು ಇಡೀ ಹೂದೋಟವು ಒಂದು ಹೂಗೊಂಚಲು ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು ಹೂಭಾರಕ್ಕೆ ಪರಿಮಳಕೆ ಪಕ್ಕಾಗಿ ಹೂವಾಡಗಿತ್ತಿಯು ತೂಗಿರಲು- ನೋಡು… ಬ… ಎಂದವನ ಕರೆದೆ ಅವನೋ…...

ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ ಬಾಯಿ ತೆರೆದುಕೊಂಡೆ. ಈಗ ಮೆಲ್ಲಲೇಬೇಕು ಕವಳ. ಚಟ ಎಷ್ಟೆಂದರೂ ಚಟವೇ: ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ ಹಂಗೆಲ್ಲ ಸಿಕ್ಕುವ ಸರಕಲ್ಲ. ಎದುರಿಗೆ ಅದೇ ಹಳೆ...

ಕಾದಿದ್ದೀಯಾ ನೀನು ಯಾರಾದರೂ ಬಂದಾರೆಂದು, ಕಲ್ಲೊಣಗಣ ಕಿಚ್ಚು ಉರಿಸುವವರು, ಅಸಾಮಾನ್ಯರು, ಶಿಲೆಗೆ ಜೀವ ತರುವ ಅಪರೂಪದವರು, ನಿನ್ನೊಳಗಿನ ಆಳ ಮುಳುಗಿ ತೋರುವವರು ಬಂದಾರೆಂದು. ಸಂಜೆಯ ಇಳಿ ಬಿಸಿಲು ದಪ್ಪಹೊತ್ತಗೆಗಳ ಚಿನ್ನದಕ್ಷರಗಳಿಗೆ ಹೊಳಪು ತಂದಿದ...

ನನ್ನ ಹಾಡು ಹಾಡು ಹಾಡಿನಾನಂದದ ರೂಪ ಜೀವ ಜೀವ ಹೃದಯಗಳಲ್ಲಿ | ಮನುಜ ಮನಕೆ ತಂಪು ನೀಡಿ ಬಾಳಿನಂಗಳದಲಿ ಬೆರೆಯಲಿ | ಮನವು ತೊಟ್ಟಿಲಾಗಿಸಿ ತೂಗಿ ನೊಂದ ಜೀವಿಗೆ ನಲಿವಾಗಲಿ ! ಬೆರೆತಾದ ಬಾಳಿಗೆ ಸ್ವರವಾಗಿ ಸೆಳೆದು ಪ್ರೇಮ ಸುಧೆಯಾಗಲಿ ! *****...

ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...