ಕೇಳುತಿದೆ ಆಹ್ವಾನ ದಿಶೆದಿಶೆಯ ತುದಿಯಿಂದ ದಳ್ಳುರಿವ ನೆಲದಿಂದ ಬೇವ ಜನದೆದೆಯಿಂದ ಕೇಳಿಯಲ್ಲಿ ರಾಜ್ಯ ಸಾಮ್ರಾಜ್ಯಗಳ ನುಂಗಲಿಹ ಕಾಲಭೈರವನಿಂದ.  ೧ ‘ಶಾಂತಿಯಲಿ ಪ್ರೀತಿಯಲಿ ಸೊಗಬಾಳು ಬಾಳೋಣ ಅಂತಿರುವ ಇಂತಿರುವ ‘ ಎಂದು ಕನಸನು ಕಂಡು ನ...

(ನೀರು) “ಬಿಸಿಲಿಗೆ ಬೇಸತ್ತು ಹೋದೆನು ಭೂಮಿಯನ್ನು ಬಿಟ್ಟು ಮೋಡವಾಗಿ ಮೇಲೆ ಚರಿಸುವೆ ನಭದೊಳಗಾಮೇಲೆ ಚಂದ್ರ ಸೂರ್ಯರನ್ನು ಮುಸಕುವೆ ನಿಮಿಷದೊಳಗೆ ನಾನು ಚಿಕ್ಕ ಚಿಕ್ಕೆಗಳನು ಉದರಲು ಉದರದಿ ಹಿಡಿಯುವೆನು ಶಾಂತಿ ಮಾಡುವವರು ಭೂಮಿಗೆ ನಾನಲ್ಲದೆ ...

೧ ದೀವಳಿಗೆಯೊಳು ಕಾಂಬ ಸಾಲು ದೀಪದ ತೆರದಿ ‘ಭಾವ’ ದೀಪಗಳೆಲ್ಲ- ಒಂದಾಗಲಿಹವನೆಂದೋ? ೨ ‘ಒಂದ’ ರೊಳು ನೂರಾಗಿ ನೂರರೊಳಗೆನಿತೆನಿತೊ ವಿರಸ ಭಾವಗಳುದಿಸಿ ಹೃದಯವನು ಕೊರೆಯುತಿವೆ ೩ ಹಿಂದಿನಂತೆಯೆ ಬುದ್ಧ- ಬಸವೇಶ್ವರರು ಜನಿಸ...

ನೀಲ ದಿಗಂತಕೆ ಮೋರೆಯನೆತ್ತಿ, ಸುಂಟರ ಗಾಳಿಯನೂ ಬದಿಗೊತ್ತಿ, ಮುಗಿಲೊಳಗೋಡುವೆ ಮೋಡನ ಹತ್ತಿ. ಯಂತ್ರ-ವಿಹಂಗಮ ವಾಹನವೇ. ಐದು ಖಂಡಗಳ ಭಾರವ ಹೊತ್ತು ಮೂರೇ ದಿನದಲಿ ವಿಶ್ವದ ಸುತ್ತು ! ಜಗದಾಕಾರವು ನಿನಗೇ ಗೊತ್ತು ! ಯಂತ್ರ-ವಿಹಂಗಮ ವಾಹನವೇ. ಎಣ್ಣೆಯ ...

ಕವಿದಿತ್ತು ಇರುಳು ಮನವೆಲ್ಲ ಮುರುಳು ಏನೊಂದು ತಿಳಿಯದಂತೆ ಬೀಸಿರಲು ಮಂಜು ಹರಡಿರಲು ನಂಜು ದಶದಿಕ್ಕು ಅರಿಯದಂತೆ ಯಾತ್ರೆಗೆಯೆ ಎಂದು ಹೊರಟಿರ್‍ದೆನಂದು ತಾಯ್ಮಡಿಲಿನಲ್ಲಿ ಮಲಗಿ ಹೊಂಗಿರಣವೆಂದು ಬೆಳಗುವುದೊ ಎಂದು ತಳಮಳಿಸುತಿದ್ದೆ ಮರುಗಿ ಆತುರದಿ ಸೆ...

ಅಂದು ಏನು ಹೇಳಿದ್ದ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ ಹೊರಳಿ ಬಿದ್ದೆ ವಿಷವ ನೆಕ್ಕಿ ಬದುಕಲಿ...

ಡೌಡವ ಡೌಡವ ಎನ್ನುತ ದೇಹಯಂತ್ರ ದುಡಿಯುತಿದೆ: ಈ ಸ್ವತಂತ್ರ ತಂತ್ರವೆನ್ನ ಮನಕೆ ದಿಗಲುಒಡಿಸುತಿದೆ. ಎಲ್ಲಿ ಮುಟ್ಟಿಲಲ್ಲಿ ಮಿಡಿದು, ಕಿವಿಯ ಬಳಿಯೆ ನುಡಿದು ದುಡಿದು ವಿರತಿಯಿಲ್ಲದೊಂದೆ ರೀತಿ, ಎನಗಾಲಿಸಲಾಗೆ ಭೀತಿ; ಡವಡವೆಂದು ಡವಡವೆಂದು ದೇಹಯಂತ್ರ ...

`ಪತ್ರಂ ಪುಷ್ಪಂ ಫಲಂ (ಚ) ತೋಯಂ’ ಇತ್ತರೆ ಬರುವೆನು ಹತ್ತಿರವೇ ಎಂ- ದತ್ತೂ ಕರೆದೂ ಭಿಡೆಗಿಡೆಯಿಲ್ಲದೆ ನಯಭಯವಿಲ್ಲದೆ ಭಿಕ್ಷೆಯ ಬೇಡುವ ಭಿಕಾರಿ ಭೋ ಪ್ರಭು ಜಯತು ಜಗದ್ಗುರು! ಭಗವದ್ಗೀತಾ- ಕರ್ತೃವೆ! ನೇತೃವೆ! ಎಲ್ಲೆಯು ಇಲ್ಲದ ಎಲೆ ಎಲೆ ದೇವ...

ಬೇಟೆ ಪಾಠ ಕಲಿಯಲೆಂದು ಮದ್ದು ತುಂಬಿ ಕೋವಿಗೆ ಗುರಿಯ ಹಿಡಿದ ಬಳಿಯ ಗಿಡದ ಅರಳುತಿದ್ದ ಹೂವಿಗೆ ಗುರಿಯು ತಪ್ಪಿ ತಾಗಿತೊಂದು ಮೇಯುತಿದ್ದ ಗೋವಿಗೆ ನಗೆಯು ಬಂತು ಅದೇ ಗಿಡದ ಬುಡದ ಬಿಳಿಯ ಹಾವಿಗೆ ಭೀತಿಯಿಂದ ಹಾರಿಕೊಂಡ ಕೋವಿಯೊಡನೆ ಭಾವಿಗೆ ! *****...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...