
ಜೋಲು ಮೋರೆಯ ಮಾಡಿ ಕಲ್ಲ ಮೇಲೆಯೆ ಕುಳಿತ ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು. ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ ಯಾರದೋ ವ್ಯಸನ, ಆವದೋ ಚಿಂತನ ಮಾರುತನ ಮಂದ ಅಲೆ ತುಂಬುತಿದೆ ಮನ ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿ...
ಏನು ಲೋಕ ಏನು ಜನ, ಏನು ಶೋಕ ಏನು ಮನ ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ! ನೇಹವ ಬಯಸಿತು ತನು ಮನ ಗೇಯವ ಹಾಡಿತು ಅನುದಿನ ಭವದಲಿ ವ್ಯರ್ಥವೆ ಹೋಯಿತು ತವ ತವೆಯುತ ಬಾಳು ಗೋಳಾಯಿತು ಏನದು ಮನದಾ ಮಹದಾಶೆಯು ಮೇಣದು ಮಮತೆಯ ಸುಖದಿಂಗಿತವು ಯಾಕದು...
ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ ನೀನು ಸುಂದರಿಯಂತೆ ತುಂಬುಗಲ್ಲದ ಚೆಲುವಿ ಅರೆ ಬಿರಿದ ತುಟಿಯ ಒಲವಿ ನೀನು ಸಂಪಿಗೆಯ ಹೂವಂತೆ…… ನಿನ್ನ ಕಂಪನು ಹೊಗಳಿದರು ಸ್ವರದ ಇಂಪನು ಸುರುವಿದರು...
ಕಂಬನಿಯೆ ಏಕಿಂತು ಒತ್ತರಿಸಿ ಬರುವೆ? ಕಂಪಿಸುವ ಚಿತ್ರದ ಇರವನ್ನೆ ಮರೆವೆ? ಮಿಥ್ಯಕ್ಕೆ ಗೆಲುವಾಯ್ತು ಸತ್ಯಕ್ಕೆ ಸೋಲಾಯ್ತು ದುಃಖವು ಮಿಗಿಲಾಯ್ತು ಸುಖದ ಮನೆ ಹೋಯ್ತು ಎಂದಿದಕೆ ಏಕೆ ಕಣ್ಣೀರು ಬದುಕಿಗಂಜಿ ಹೇಡಿ, ಹಿಂಜರಿವೆ? ವಂಚಿಸಿತು ಜಗಜನವು ಸಂಚಿ...
ಕೋಟಿ ಜನ ಒರಲುವರು ನರಳುವರು, ತೆರಳುವರು ಅವರ ಬದುಕಿನ ತಾಣ ಅರೆಸತ್ತು ಉಳಿದ ಪ್ರಾಣ ನಮ್ಮ ಭಾಷೆಯಲಿ ಹಟಮೆಂಟು ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು…. ಹುಟ್ಟು-ಸಾವು ಯೌವನದ ಕಾವು ಮುದಿಯಾದ ನೋವು ಗಳ ಸೆಳತ….ಅಲೆತಕದು ಠಾವು…....
ವ್ಯಥೆಗೊಂಡ ಮನಸೆ ವ್ಯಥಾ ಏನು ಕನಸು? ಇಲ್ಲಿಲ್ಲ ಶಾಂತಿ ಎಲ್ಲೆಲ್ಲೂ ಕ್ರಾಂತಿ! ಮನದೊಳಗಿರುವ ವೇದನೆಯನ್ನು ತಿಳಿಯದು ಜಗವು ನಿಜವಿಹುದನು ದುಃಖದ ಜ್ವಾಲೆ ಬೇನೆಯ ಶೂಲೆ ಚಿತ್ತವ ಸುಡುತಿದೆ ಹೊತ್ತರಿಯದೆಯೆ. . . .! ದೂರದ ಬೆಟ್ಟ ನೋಟಕೆ ಇಷ್ಟ ಯಾರರಿವ...









