ಹುಳಿ ಹಣ್ಣು

ಕೊಂಬೆ ರೆಂಬೆಯಲ್ಲಿ ಹಣ್ಣು ನೇತುಬಿದ್ದರೆ ತುಂಬ ಹಸಿದ ನರಿಯು ಬಂದು ನೆಗೆದು ನೋಡಿತು. ಚಿಗಿದು ನೆಗೆದು ನೋಡೆ ನರಿಗೆ ನಿಲುಕದಾಯಿತು. "ತೆಗೆ, ಅದೆಲ್ಲ ಹುಳಿ!" ಎಂದು ನರಿಯು ಹೊರಟಿತು. ನೇರಿಳೆಲ್ಲ ಹುಳಿಯೆ ಆಯ್ತು ಸಾಗದಿದ್ದ...

ನರ-ವಾನರ

ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ.......... ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು! ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು, ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು; ಸಂಶಯ...

ನಾವಿಕರು

|| ನಾವಿಕರಾವಿಹವೆವು ಜೀವಾರ್ಣವದಲ್ಲಿ ತೇಲುತ್ತಿಹೆವು || ನಾವು ಜನುಮದ ನಾವೆ ಯೇರ್‍ದೆವು ಸಾವು ನೋವನು ದೂರಲಿರುವೆವು ಜೀವಕಕ್ಷರ ಭಾವ ಹೊಳೆಯಲಿ -ಜಾವ ಜಾವಕೆ ನಾಡನೆನಹಲಿ- ಅಲ್ಲಿತೆರೆ ಕೊರೆ ಕಲ್ಲು ಸುಳಿಯಿವೆ! ಇಲ್ಲಿ ಹೂಡಿರಿ! ದೋಣಿಯೆನ್ನುತ...

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ. ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ. ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ! ಗಂಧವಿಲ್ಲದ...

ಆತಂಕ

ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು! ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ ಕಿರುಕುಳದ ಭಾರವನು ತಿರುಗುತಿವೆ ಮೋಡಾ. ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ. ಬಿಳಿ ಮೋಡಗಳನುಟ್ಟು...

ಉದಯ ರಾಗ

ಬೇಸರವಾಗಿದೆ ನಗರದಲಾಟ ಧೂಸರ ಧೂಳಿನ ಜೀವನವು ಆಶಿಸಿ ಚಿಗುರೊಳಗಾಡಿತು ಗಾಳಿ ಭಾಷೆಗೆ ನಿಲುಕದ ಭಾವಕೆ ಬೆಂದು. ಬೇಗ ನಡೀ ಹೊರಡೇಳು ನಡೀ ಕೂಗಿದಳಾವಳೊ ಕಾಡಕಿನ್ನರಿಯು ಸೂಟಿಯು ಸಂದರೆ ನಂದಿಯ ಕೂಟ ನೋಟಕೆ ಹಬ್ಬವು ಜೋಗದ...

ಭಂಡಾರ

ಅರಳಿ ದಳದಳ ಸುರಿಯೆ ರಜಕಣ-ಹರಿಯೆ ಮಧುರಸ ಮೆರೆಯೆ ದುಂಬಿಯು ತಿರುಳ ಭಾವಕೆ ಹರಿಯೆ ವೀರ್ಯವು ಗೂಢ ತೆರದೊಳಗೆ ಹೊರಗಣಾರ್ಥಿಕ ಸರದಿ ಕಳೆಯಲು- ಇರದು ಮಧುರಸವಿರದು ಶುಭರಜ ವಿರದು ರಂಗಿನಪೆಂಪದಾವದು ಬಲಿಯೆ ಬಂಡಾರ. * *...

ಸಾಂತಾಳಿ

ಅದುರುವ ಅಧರದಲಿರುವುದು ಗಾನವು ವದಗಿದ ಕುಸುಮವು ತುರುಬಿನಲಿ ಕಳಕಳ ರವದಲಿ ನುಣುಪಿನ ಬೆಣಚಲಿ -ಸುಳಿಯುವ ಹೊಳೆಯೋ ಯಾರೆಲೆನೀ- ಕೆಲಸಕೆ ನಲಿವವು ನಿನ್ನಂಗಗಳು ಅಲಸದೆ ನಡುನಡು ನಗುವದದೇಂ ಮಂಜುಳ ಮಾತಿನ ಇಂಗಿತವೇನದು -ಅಂಜದ ಕಂಗಳ ಭಾಷೆಯದೇಂ-...

ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ ಘನವರಣ ಹನಿರಸದ ಬಲು ಸಿವುರಿನ ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ ಕಣಕಣನೆ ದನಿಗೊಡುವ ಗಜ...

ಚಿಟ್ಟೆ

ನಿತ್ಯ ನಿತ್ಯ ಪಾರಿಜಾತ ಚಂಪ ಮಂದಾರವು ಮರವು ಗಿಡವು ಬೇರ ಬಳಿಗೆ ಸುಮವ ಸಲಿಸಲು ಭೂಮಿ ತಾಯಿ ಬಣ್ಣ ಬಣ್ಣ ದರಳ ನಿವುಗಳ ಮಾಲೆಯೆತ್ತಿ ಪ್ರೇಮದಿಂದ ಮೇಲೆ ಎಸೆವಳು. ವ್ಯೋಮವದನು ಎತ್ತಿ ಜಗಕೆ ನೋಡಿರೆನುವನು...