ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ....

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೦

ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೯

ಹಸಿವಿನ ಸಂತೆಯಲಿ ಬಿಕರಿಗೆ ಬಿದ್ದಿದೆ ರೊಟ್ಟಿ ವಿಧವಿಧದ ರೊಟ್ಟಿಗೆ ವಿಭಿನ್ನ ಬೆಲೆ. ಕೊಳ್ಳುವುದು ಅವರವರ ಅರ್ಹತೆ. ರೊಟ್ಟಿ ಬೆಲೆಯುಳ್ಳ ನಿರ್ಜೀವ ಸಾಮಗ್ರಿ *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೭

ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****