ಕಲಾಕೃತಿಯೊಂದು

ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚಿಟ್ಟ ದುಬಾರಿ ನಿಟ್ಟುಸಿರುಗಳು. ಬೆನ್ನಿಗೆ ತಾಗಿದ...
ಪೂರ್ವಗ್ರಹ

ಪೂರ್ವಗ್ರಹ

ಪ್ರಿಯ ಸಖಿ, ಸೂಫಿ ಕಥೆಯೊಂದು ನೆನಪಾಗುತ್ತಿದೆ. ಒಬ್ಬಾತ ಸೂಫಿ ಗುರುವಿನ ಬಳಿ ಹೋಗಿ ಸ್ವಾಮಿ ನಾನು ನಿಮ್ಮಿಂದ ಸತ್ಯ ಹಾಗೂ ವಾಸ್ತವದ ಬಗ್ಗೆ ಅರಿಯಬೇಕೆಂದಿದ್ದೇನೆ. ದಯಮಾಡಿ ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ ಎಂದ. ಆತನ...
ಕಾಲ್ತೊಡರುವ ಜಾತಿ

ಕಾಲ್ತೊಡರುವ ಜಾತಿ

ಪ್ರಿಯ ಸಖಿ, ನಮ್ಮದು ಹಲವು ವೈರುಧ್ಯಗಳನ್ನು ದ್ವಂದ್ವದ ವಿಚಾರಗಳನ್ನು ತುಂಬಿಕೊಂಡಿರುವ ದೇಶ. ಪ್ರಜಾತಂತ್ರ ಆಡಳಿತ ವ್ಯವಸ್ಥೆಯಿರುವ ನಮ್ಮ ದೇಶವನ್ನು ನಾವು ಜಾತ್ಯಾತೀತ ದೇಶ ಎಂದು ಕರೆದುಕೊಳ್ಳುತ್ತೇವೆ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿಗಳಿದ್ದರೂ ಎಲ್ಲರೂ ಸೋದರತ್ವ ಹೊಂದಿ...
‘ಬೇಕು’ ರಾಕ್ಷಸ

‘ಬೇಕು’ ರಾಕ್ಷಸ

ಪ್ರಿಯ ಸಖಿ, ಆಸೆಯೇ ದುಃಖಕ್ಕೆ ಮೂಲ ಎಂದ ಗೌತಮ ಬುದ್ಧ. ಹಾಗೆಂದು ಆಸೆಗಳೇ ಇಲ್ಲದ ಸ್ಥಿತಿಗೆ ತಲುಪಿದರೆ ಅದು ಮನುಜಕುಲದ ಅವಸಾನವೇ ಸರಿ. ಮನುಜನ ಉಳಿವಿಗೆ ಆಸೆಯೆಂಬುದು ಇರಲೇಬೇಕು. ಎಲ್ಲವೂ ಬೇಕು ಎನ್ನುವ ಅತಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೭

ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೪

ರೊಟ್ಟಿ ಹಸಿವಿನ ನಡುವೆ ಒಂದು ನಿಗೂಢ ಕಾಲುವೆ. ಗುಪ್ತಗಾಮಿನಿಯೊಡಲಲ್ಲಿ ಹಾಗೇ ಸುಪ್ತವಾಗಿದೆ ಖಾಸಗಿ ಕ್ಷಣಗಳು. ಅವರು ಸಾಕ್ಷಿ ಕೇಳುತ್ತಾರೆ ರೊಟ್ಟಿ ಹಸಿವು ಒಳಗೇ ನಗುತ್ತವೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೨

ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****