ಗಳಿಗೆಬಟ್ಟಲ ತಿರುವುಗಳಲ್ಲಿ – ೭೬

ಎಲ್ಲ ನಾಚಿಕೆ ಬಿಟ್ಟು ನಡು ಬೀದಿಯಲಿ ಕುಣಿವ ರೊಟ್ಟಿಗೆ ಮಾನಾವಮಾನಗಳ ಪರಿವೆ ಇಲ್ಲ. ನರ್ತನದೊಳಗೇ ನಡೆಸಿ ಅನುಸಂಧಾನ ತಾನೂ ಜೀವಂತಗೊಂಡು ಸೃಜಿಸುತ್ತದೆ ಕೋಟ್ಯಾಂತರ ಮರಿ ರೊಟ್ಟಿ ಹಿಂಡು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೭೪

ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೭೦

ಕ್ಷಣಕ್ಷಣದ ಆವರಣದಲ್ಲಿ ಕಣವಾಗುವ ರೊಟ್ಟಿ ಅಪಾರ ಲಭ್ಯತೆಗಳಲಿ ಅಧಿಕವಾಗುವ ಹಸಿವು ಪೂರ್ಣತೆ ಶೂನ್ಯತೆಗಳು ಏಕಕಾಲಕ್ಕೆ ರೊಟ್ಟಿಯ ಎರಡು ಮುಖಗಳು ಹಸಿವಿನೆರಡು ಆಶಯಗಳು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೯

ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****
ಮನಸಿಗೆ ಪಾಠ

ಮನಸಿಗೆ ಪಾಠ

ಪ್ರಿಯ ಸಖಿ, ದುಃಖತಪ್ತ ಶಿಷ್ಯನೊಬ್ಬ ತನ್ನ ಗುರುವಿನ ಬಳಿಗೆ ಬಂದು ಗುರುಗಳೇ ಈ ಪ್ರಪಂಚದಲ್ಲಿ ನನ್ನನ್ನು ಯಾರೂ ಪ್ರೀತಿಸುವವರಿಲ್ಲ. ನಾನು ಯಾರಿಗೂ ಬೇಕಾಗಿಲ್ಲ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ...