ಪ್ರಶ್ನೆ ಆರೋಪ
ಮಿಥ್ಯೆ ವಿಪ್ರಲಾಪ
ಎಲ್ಲವ ಮೌನದಿ ಮೀರಿದೆ
ರೊಟ್ಟಿ ತಣ್ಣಗೆ.
ನಗುತ್ತದೆ ಒಳಗೇ ಸಣ್ಣಗೆ.
ಪ್ರತಿಭಟನೆಯ ಹೊಸಹಾದಿ
ಅರಿವಿಲ್ಲ ಹಸಿವೆಗೆ
*****