ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ ಕಾಮಶಾಸ್ತ್ರ ಯಾವಲ್ಲಿತ್ತು ಕಾಮ ಸುಟ್ಟು ಬಹು ಕಷ್ಟವಾಯಿತು ರತಿದೇವಿಗೆ ಬಂದಿತು ಹೊತ್ತು ಭೂಮಿಯೊಳಗ ಆತಿ ಕೌತುಕವಾಯಿತು ಆ ಮಹಾದೇವರು ಬ್ಯಾಸತ್ತು ನೇಮ ಹಿಡಿದು ಆ ಹೇಮಕೂಟದಲಿ ತಾನು...

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ...

ಕಲ್ಲುಗಡಗಿಯ ಒಳಗೆ ಹಕ್ಕಿ

ಕಲ್ಲುಗಡಗಿಯ ಒಳಗೆ ಒಂದು ಹಕ್ಕಿ ಐತ್ರಿ ಸಲ್ಲು ಸಲ್ಲಿಗೊಮ್ಮೆ ಅದು ಅಲ್ಲಾನ ನೆನಿತೈತ್ರಿ ಬಲ್ಲವರು ಹೇಳಿರಿ |ಪ| ಮಾರಿ ಮೇಲಕ ಮಾಡಿದರ ದೂರದಿಂದ ಕಾಣತೈತ್ರಿ |೧| ತೋರಿ ತೋರದ್ಹಾಂಗ ಗುಪ್ತರೂಪದಿಂದೈತ್ರಿ ಹೊರಗ ಒಳಗ ಕಾಣತೈತ್ರಿ...

ಜಿಟ್ಟಿಹುಳಗಳು ಎದ್ದಾವು ನೋಡು

ಜಿಟ್ಟಿಹುಳಗಳು ಎದ್ದಾವು ಇದು ನೋಡು ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ|| ವಸುಮತಿಪತಿ ವರದಿಂ ಕುಮಾರ ಈಶಾನ್ಯೆಂಬುವ ಪರಮನವತಾರಾ ರೋಸಬಾದಶಾ ಇಂಗ್ಲೀಷಮತವನುದ್ಧರಿಸಲು ಬಹುಧಾನ್ಯನ ಸಂವತ್ಸರಕೆ ಉತ್ತಮ...

ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ ಬೇಗದಿರಾಗರಚನೆಯಿಂದ ಕೊಂಡಾಡಿ ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ || ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು ಸಂಸಾರಶರಧಿಯ ನೀ ದಾಂಟು || ಆ, ಪ. ||...

ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ || ಬಂದು ಕಲ್ಕಿ‌ಅವತಾರ ಸೀಮಿಗೆ ಮು೦ದುವರಿದು ಯಮರಾಜನ ಕೊಲೆಗಳ ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.|| ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ...

ಶ್ರೀ ಶಿವಾಪರಾಧ ಸ್ತೋತ್ರ

ಜಯತು ಗಣಪತಿ ಜ್ಞಾನ ದಿನಮಣಿ ಜಯತು ಸರಸ್ವತಿ ವಾಗ್ವಿಲಾಸಿನಿ ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ ಜಯತು ಕವಿವರ ವ್ಯಾಸ ಶುಕಮುನಿ ಜಯತು ವಾಲ್ಮೀಕಿ ಋಷಿ ಕಲಾಗ್ರಣಿ ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧||...

ಶ್ರೀಕೃಷ್ಣ ದಂಡಕ

ಶ್ರೀರಮಣ ಸರ್ವೇಶ ವಾರಿಜಾದಳನಯನ ಮಾರಹರಪಿತನ ಮಂದಹಾಸವದನ ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು- ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧|| ಮೀರಿದ ಕಾಡ್ಗಿಚ್ಚು...

ಶ್ರೀ ದೇವಿ ದಂಡಕ

ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ ಜಯ ಜಯತು ಜಗದಾಂಬೆ ಸಾಂಬೆ ತ್ರಯ ಜಗವನೆಡಬಿಡದೆ ತುಂಬೆ ನಯ ವಿನಯಗುಣ ಗಣಕದಂಬೆ ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ|| ಏನು ಇಲ್ಲದಲಂದು ಓಂಕಾರ ಪ್ರಣಮದಿ ನೀನು ಮೂಲದಿ...

ಶ್ರೀ ಹನುನುಂತದೇವರ ದಂಡಕ

ಹನುಮಂತ ಭೂಪಾ ಸದ್ಗುಣಮಣಿ ಶಾಂತರೂಪಾ || ಪ || ಹನುಮಂತ ಮಹಾಮುನೀಶ ವಾಯು ತನಯ ವಾನರೇಂದ್ರ ವನಚರ ಶುಭಕಿರಣ ವಿಹಾರನು ಮಹಿಮಾಗಾರಾ ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ ಕ್ಷೋಣಿಪಾಲ ರಘುಚರಣ...