Home / Kannada

Browsing Tag: Kannada

ಬತ್ತಿಯಲ್ಲಿರುವ ಪ್ರತಿ ಎಳೆಯಲ್ಲು ಅಡಗಿ ಕುಳಿತಿದೆ ಬೆಳಕಿನ ಕಿರಣ ಎಣ್ಣೆಯಲ್ಲಿರುವ ಪ್ರತಿ ಕಣದಲ್ಲು ತುಡಿಯುತ್ತಿದೆ ಬೆಳಕಿನ ಹೂರಣ ಮಣ್ಣಿನ ಹಣತೆಯ ಹಾಸಿಗೆಯಲ್ಲಿ ಎಣ್ಣೆ ಬತ್ತಿ ಬೆರೆತು ಬಿರಿಯುತ್ತಿದೆ ಬಿರುಸು ಬಾಣ *****...

ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ...

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ….. ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ ಕರೆದು ಊರ ಗಟ್...

ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ ಗೋರಿಯಾಚೆಗಿನ ಮರ. ಎಲೆಗಳಲ್ಲಿ ರೌರವ ಮರ್‍ಮರ ಹುದುಗಿಸಿಟ್ಟ ಎದೆಯ ಹಾಡನ್ನು ನಿರ್ಜನ ನೆಲೆಯಲ್ಲಿ ಆಗಾಗ ಗುನುಗುತ್ತಾ, ನಿರುಮ್ಮಳ ನಗ್ನತೆಯ ಧರಿಸಿ ಬಯಲಾಗಬೇಕು. ವಿಷಣ್ಣತೆಯ ಹಿಂಡು ಹಿಂಡು ಕುರಿಗಳು ದಾರಿಯುದ್...

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ ತೆರೆಯದ ಪ್ರಕ್ಷ...

ಏರಬೇಕೆ? ಹೇಗೆ? ಈ ಬೆಟ್ಟಗಳು ಮಂಜು ರಾಶಿಗಳಲ್ಲ. ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ. ಅಲ್ಲಿರುವ ನಿನಗೆ ಇಲ್ಲಿರುವ ನಾನು ಕಳಿಸಿದ ದುಃಖದ ಸುದ್ದಿ: ಒಮ್ಮೊಮ್ಮೆ ಎದ್ದಾಗಲೂ ನೆತ್ತರೊಳಗಿನ ಪರ್ವತ ನನ್ನ ಕೆಳಕ್ಕದುಮಿ ‘ಇಲ್ಲ’ ಅನ್ನುತ್ತದೆ. ‘...

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು? ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ! ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ ನಿಂತ ನೆಲವನ್ನೆ ಕೊರೆದು ಗರಗರ ಬುಗುರಿ ತಿರುಗಿ...

ಉರುಳಿತ್ತು ಒಂದೂವರೆ ವರುಷ ಹರುಷ ಕಳೆಯಿತು ಕಳೆದು ಕೂಡಿ ಅಳೆದು ಅದರದರ ಭಾವನೆ ಭಾಗಿಸುವಂತೆ ಹರುಷ ಕಳೆಯಿತು|| ನೆನಪೆಂಬ ಶೇಷ ಉಳಿದು ಮನವ ತುಂಬಿ ಒಲಿದು ಪ್ರೀತಿ ಎಂಬ ಪಕಳೆ ಉದುರಿ ಇಳೆಗೆ ನವನನೀನತೆಯ ಭಾಗಿಸುವಂತೆ ಹರುಷ ಕಳೆಯಿತು ||ಉ|| ನಾನು ನನ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...