ಹನಿಗವನ ಪ್ರಶ್ನೆ ಉತ್ತರ ಪರಿಮಳ ರಾವ್ ಜಿ ಆರ್ May 30, 2018April 8, 2018 ಪ್ರಶ್ನೆ ಎಲ್ಲಾ ದಿಕ್ಕಿನಲ್ಲಿ ‘ಉತ್ತರ’ಕೆ ದಿಕ್ಕೆ ಇಲ್ಲ ***** Read More
ಹನಿಗವನ ಅವತಾರ ಪರಿಮಳ ರಾವ್ ಜಿ ಆರ್ May 23, 2018April 8, 2018 ಹತ್ತಾವತಾರ ಮಗಳ ಹೆತ್ತಾವತಾರ ಮಾವನ ಅವತಾರ! ***** Read More
ಹನಿಗವನ ಮಾಮ ಪರಿಮಳ ರಾವ್ ಜಿ ಆರ್ May 16, 2018April 8, 2018 ಮಾಮ ಎಂದರೆ ಸೀದಾಸಾದಾ ಮಾಮ ಬಾನಿನ ಚಂದಮಾಮ! ಮಾವ ಎಂದರೆ ಮಗಳನು ಕೊಟ್ಟ ಗತ್ತೇ ಬೇರೆ ಸೋತು ನಿಂತ ತಾಕತ್ತೇ ಬೇರೆ ಮಾತು ನಿಂತ ಮನಸ್ಸಿನ ಗೊಂದಲದ ವಕಾಲತ್ತೇ ಬೇರೆ ***** Read More
ಹನಿಗವನ ಮಾವ – ಅಳಿಯ ಪರಿಮಳ ರಾವ್ ಜಿ ಆರ್ May 9, 2018April 8, 2018 ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! ***** Read More
ಹನಿಗವನ ಗೆರೆ ಪರಿಮಳ ರಾವ್ ಜಿ ಆರ್ May 2, 2018April 8, 2018 ನದಿಯ ಮೇಲಿನ ಗೆರೆ ಓಡಿ ಹರಿಯುವ ಪರೆ ಮರಳಿನ ಮೇಲಿನ ಗೆರೆ ಗಾಳಿಗೆ ಆಡುವ ಧರೆ ಕಲ್ಲಿನ ಮೇಲಿನ ಗೆರೆ ಸ್ನೇಹದ ಸಾಕ್ಷಿಯ ಕರೆ ***** Read More
ಹನಿಗವನ ಧಾರೆ ಪರಿಮಳ ರಾವ್ ಜಿ ಆರ್ April 25, 2018April 8, 2018 ಕಾವು ಕೊಟ್ಟರೆ ಹುಟ್ಟುವುದು ಕಾವ್ಯ ಧಾರೆ ಜೀವಕೊಟ್ಟರೆ ಹುಟ್ಟುವುದು ಜೀವನ್ಮುಕ್ತಿ ಧಾರೆ ***** Read More
ಹನಿಗವನ ಜಾಣ – ಪೆದ್ದ ಪರಿಮಳ ರಾವ್ ಜಿ ಆರ್ April 18, 2018April 8, 2018 ಗೆದ್ದ ಎತ್ತಿನ ಬಾಲ ಹಿಡಿದು ಪೆದ್ದನೂ ಹದ್ದಾಗಿ ಹಾರಿದ್ದ ಸಿದ್ದಿ ಸಾಧಿಸುವ ಜಿದ್ದಿನಲಿ ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ ***** Read More
ಹನಿಗವನ ಹೊತ್ತಿನ ಮಹಿಮೆ ಪರಿಮಳ ರಾವ್ ಜಿ ಆರ್ April 11, 2018April 8, 2018 ಹೊತ್ತು ಬಂದಾಗ ಕೊಡೆ ಹಿಡಿದು ಸೊತ್ತು ಸಂಪಾದಿಸಿದ್ದ ತಿಮ್ಮ ಹೊತ್ತಿಲ್ಲದ ಹೊತ್ತಲ್ಲಿ ಹೋಗಿ ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ ***** Read More
ಹನಿಗವನ ಹೌದಪ್ಪ ಅಲ್ಲಪ್ಪ ಪರಿಮಳ ರಾವ್ ಜಿ ಆರ್ April 4, 2018April 8, 2018 ‘ಹೂಂ’ ಅಂದು ಹೌದಪ್ಪ ಹೊಟ್ಟೆ ತುಂಬಾ ತುಂಬಿಸಿಕೊಂಡ ‘ಊಹೂಂ’ ಅಂದು ಅಲ್ಲಪ್ಪ ಪಟ್ಟೆ ತಲೆಗೆ ಕಟ್ಟಿಸಿಕೊಂಡ ***** Read More
ಹನಿಗವನ ಮಂಗಪ್ಪ ಪರಿಮಳ ರಾವ್ ಜಿ ಆರ್ March 28, 2018January 2, 2018 ಅವರಿಗೆ ಅವರ ಹಂಗಪ್ಪ ಇವರಿಗೆ ಇವರ ಹಂಗಪ್ಪ ಎಲ್ಲಿದ್ದರೆ ಅಲ್ಲಿ ಹಂಗಪ್ಪ ಇರುವುದ ಕಲಿ ಮಂಗಪ್ಪ ***** Read More