ರಾಜ ಮುತ್ತು ರಾಜ ಕನ್ನಡದ ನೀ ಮುದ್ದು ರಾಜ || ಪ || ರಂಗಭೂಮಿಯ ಕೃಷಿ ಅಂಗಳದಲಿ ನಟನೆಯ ಕಲೆಯ ಬೀಜ ನೀವಾಗಿ ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ ಗಾನ...
ಕನಸು ಬಿದ್ದಿತ್ತು ನನಗೊಂದು ಮದುವೆಯ ಮುನ್ನಾ ದಿನದಂದು ಅಲ್ಲಿತ್ತು ಸಂಭ್ರಮ ತುಸು ಜೋರು ಅದರಲ್ಲಿ ಅವಳದೇ ಕಾರು ಬಾರು. ಅಲ್ಲಿಯೇ ಕುಳಿತಿದ್ದೆ ಕಾರಿಡಾರಿನಲ್ಲಿ ನಾನು ತಂಗಾಳಿಯಂತೆ ಸುಳಿಯುತ ಬರಲವಳು ನೋಡಿಯೂ ನೋಡದಹಾಗೆ ತಿರುಗಿದಳು ಆ...
ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ಪೋರಿ ಬಂದು ನಿಲ್ಲು ಒಂದು ಸಾರಿ ನಾ ಕೇಳುವೆ ನಿನ್ನ ಮಧುರ ವಾಣಿ. ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ...
ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ...
ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ...
ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ...
ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ...
ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ...