ಮುಂಜಾನೆ ಮುಸುಕಿನಲಿ
ಅರಳಿದ ತಾವರೆಯು ನೀನಾಗಿ
ಪ್ರೀತಿಯ ಮುದವನ್ನ ನೀಡುವೆ
ನಿನ್ನ ಪ್ರಿಯತಮಗೆ
ಗೆಳತಿ ನೀನೇಕೆ ಹೀಗೆ?
ಮಧ್ಯಾಹ್ನದ ಹೊತ್ತಿಗೆ ನೀನು
ಸುಡು ಬಿಸಿಲ ಸಿಡಿಗುಂಡಾಗಿ
ಬಿಸಿ ತಾಕಿಸಿ ದೂರ ತೀರಕೆ
ಸೇರಿಸುವುದೇತಕೆ ನನಗೆ
ಗೆಳತಿ ನೀನೇಕೆ ಹೀಗೆ?
ರಾತ್ರಿಯ ಹೊತ್ತಲ್ಲಿ ತಂಪನೆರೆವ
ರತಿಯಂತಾಗಿ ಪ್ರಿಯತಮಗೆ
ರತಿ-ರಸದೂಟದ ರಸದೌತಣ
ಉಣಬಡಿಸುವ ನಿನ್ನ ಮನವೇ
ಗೆಳತಿ ನೀನೇಕೆ ಹೀಗೆ?
*****