ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು ಇಹುದು ತಂಗಿ ಕೇಳ್‌ ವಾತ್ಸಲ್ಯದಲ್ಲಿ ತುಂಬ ಮಧುರ ಬಾಂಧವ್ಯವಿರಲು ಕೊರಗೇಕೆ ಎದ...

ತಿಳಿಯಾದ ವಾತಾವರಣ ಈ ಎಲ್ಲಾ ತಲೆ ಬಿಸಿಗಳ ಮಧ್ಯೆ ಅನುರಾಧ ಬಂದಿಳಿದಾಗ ಮನೆಯಲ್ಲಿ ಎಲ್ಲಾ ನೋವು ಮರೆಯಾಗಿ ಹರ್ಷದ ಹೊನಲೇ ಹರಿಯುತ್ತದೆ. ಎಲ್ಲರಲ್ಲೂ ಉತ್ಸಾಹ ತುಂಬಿಕೊಳ್ಳುತ್ತದೆ. ಸುಶೀಲಮ್ಮ ಕಳೆದು ಹೋದ ಯೌವನ ತುಂಬಿಕೊಳ್ಳುತ್ತಾರೆ. ರಾಮಕೃಷ್ಣಯ್ಯನ...

ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ ಕನ್ನಡಕ್ಕಾಗಿ ಮಿಡಿಯಲಿ ಮನ ಕನ...

ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ ಹೂಮಳೆ ಸ...

ಹೆಚ್ಚಿನ ಶಾಲೆಗಳಲ್ಲಿಯೂ ಒಂದು ಗ್ರಂಥಾಲಯವಿರುತ್ತದೆ. ಆದರೆ ಅದು ಹೇಗಿರುತ್ತದೆ, ಅದರ ಉಪಯೋಗ ಹೇಗೆ ಆಗುತ್ತದೆ ಎಂಬ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಕಳೆದ ಶತಮಾನದ ನನ್ನದೇ ಕೆಲವು ಅನುಭವಗಳನ್ನು ಓದುಗರ ಜತೆ ಹಂಚಿಕೊಳ್ಳುವುದಾದರೆ, ನಾನು ಓದುತ...

ಕಡೆಯ ಗಂಟೆಯು ಹೊಡೆವ ಮುನ್ನವೆ ಶಿವನ ಗಂಟೆಯು ಮೊಳಗಲಿ ಅಂತರಂಗದಿ ದೀಪ ಬೆಳಗಲಿ ಜೀವ ಸುಂದರವಾಗಲಿ ಒಳಗು ಮಧುರಾ ಹೊರಗು ಮಧುರಾ ಬದುಕು ಸುಮಧುರವಾಗಲಿ ಮಾತು ಪರಿಮಳ ತುಂಬಿ ತುಳುಕಲಿ ಮನವು ಮಲ್ಲಿಗೆಯಾಗಲಿ ದಿವ್ಯ ಸಂಸ್ಕಾರಕ್ಕೆ ಆತ್ಮದ ಜ್ಞಾನ ರೆಕ್ಕೆ...

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ...

ಬೇರು ಹುಳದಿಂದಡಿಕೆ ಬುಡದಲಿ ಕೊಳೆಯು ತಿರೆ ಬೆಳೆಗಾರ ನೊಂದಿಹನು, ಸುಳಿ ಬಾಡಿತೆಂದು ವರ ಭತ್ತ ಬೆಳೆವಲ್ಲಿ ಜೀವನವೆ ಇರುವಲ್ಲಿ ಬರಿದಡಿಕೆಯನ್ನು ಬೆಳೆಯುತಿರೆ ಘನ ಸಂಸ್ಕೃತಿಯ ಬೇರೆ ಕೊಳೆಯುತಿದೆ. ಭೀಕರವು ಮುಂದೆ – ವಿಜ್ಞಾನೇಶ್ವರಾ *****...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...