ಮಡದಿ ಮಡಿಲು

ಮದುವಣ ಗಿತ್ತಿಯಂತೆ ಶೃಂಗಾರಗೊಂಡು ಒಡಲೊಳಗೇ ಮಧುಜೇನ ತುಂಬಿಕೊಂಡು ಮನದಿನಿಯನಿಗಾಗಿ ಹಾತೊರದು ನಿಂತು ಸ್ವಾಗತ ಮಾಡಿದ ಎನ್ನ ಮನದನ್ನೆ.... ಎನ್ನ ಮನದಾಸೆಯ ಅರಿತು ನೀ ನನ್ನನೊಮ್ಮೆ ಬಿಗಿದಪ್ಪಿ ಬರಸೆಳೆದು ಸೆರಗಿನ ಮರೆಯಲಿ ಅಡಗಿಸಿದಾಗ ಮರು ಮಾತನಾಡದೆ...

ಲಾಲಿ

ಅಳದಿರು ಮಗುವೇ ನೀ ಅಳದಿರು ಆಡಿಸುವೇ ನಾ ಆಟವ ಸುಮ್ಮನೆ ನೀ ನಗುತಿರು ಬಾನ ಚಂದಿರನ ಬಳಿಗೆ ಕರೆ ತರಲೇನು ಆಗಸದ ತಾರೆಗಳ ಹೆಕ್ಕಿ ತರಲೇನು ನಿನ್ನಯ ಆಟಕೆ ಮಡಿಲಲಿ ಮಲಗಿಸಿ ಲಾಲಿಯ ಹಾಡುತ...

ಅನುರಾಗ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನೂ ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾ...

ಹೊನ್ನ ಸಿರಿ

ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ...

ಸಂಗಾತಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗಿ ಮಾಗಿ ಒಂದುಗೂಡಿ ಬಾಳಲೇ ಬೇಕು ಸಹಜವಾಗಿ ಸತಿ ಪತಿಯರ ಜೀವನವಾಗಿ ಬಾಳಿಗೊಂದು ಜೋಡಿ ಇದುವೆ ಜೀವ ನಾಡಿ ಜೀವಕ್ಕೆ ಜೀವ ಇದುವೆ ಬದುಕಿನ ಭಾವ ಸರಸ ವಿರಸಗಳ...

ನನ್ನ ಮನೆ

ಅಲ್ಲಿದೆ ನನ್ನ ಮನೆ(ಸ್ಮಶಾನ) ಇಲ್ಲಿ ಬಂದಿರುವೆ ಸುಮ್ಮನೆ ನನ್ನ ಮನೆಗೆ ಸಾಗಲು ಇರುವವು ಕಾಣದ ಹಲವು ಮೈಲುಗಲ್ಲುಗಳು ನಾನು ಸಾಗಿ ಬಂದಿರುವೆ ಈವರೆಗೆ ಕೆಲವು ಅನುಭವದ ಮೈಲುಗಳನ್ನು ಮತ್ತಷ್ಟು ಹೊಸ ಮೈಲಿಯನ್ನು ದಾಟಲು ಆರಂಭಿಸಿರುವೆ...

ಹಸಿರ ಸೀಮಂತ

ಯುಗದ ಆದಿ ಯುಗಾದಿ ಭುವಿಗೆ ಇನ್ನು ಹೊಸ ಕಾಂತಿ ಹಸಿರ ಹೊತ್ತ ಗಿಡಮರಗಳು ಹಾತೊರೆದು ನಿಂತಿವೆ ನವ ಯುಗದ ಸ್ವಾಗತಕೆ ಕೋಗಿಲೆಗಳ ಇಂಚರದಿ ಮಂಗಳಕರ ನಾದದಲಿ ಭೂರಮೆಯು ಕೈ ಬೀಸಿ ಕರೆಯುವಳು ನಮ್ಮನ್ನೆಲ್ಲ ಹೊಸ...

ಅಜ್ಞಾನಿ

ನಾನು ಎನ್ನುವ ಅಹಂಕಾರವು ನಿನ್ನೊಳಗೇ ಮನೆ ಮಾಡಿರಲು ಮರೆತೆ ನೀ ನಿನ್ನವರನ್ನ ಮರೆತೆ ನೀ ಎಲ್ಲವನ್ನ... ಹುಸಿ ಕೋಪ ತರವಲ್ಲ ಮನದಿ ನಿತ್ಯ ಮನತಾಪ ಸರಿಯಲ್ಲ ಕೋಪದಾ ಮೂಲ ಕೊಲ್ಲುವುದು ನಿನ್ನ ಅದನ್ನು ಅರಿತರೆ...

ಆಸೆ – ಆಘಾತ

ನಿತ್ಯ ಸಾಗುತಲಿಹುದು ಜೀವನ ಭರದಿ ಬೇಕು ಬೇಡಗಳ ತೆಗೆದು ಹಾಕುತಲಿ ಏರಿಳಿತಗಳ ಮೆಲ್ಲನೆ ದಾಟುತಲಿ ನಿತ್ಯವೂ ಉರುಳುತಿಹುದು ಬಾಳ ಬಂಡಿ ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ! ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು ಆದರೂ ತೀರದಾ...

ಕವಿ

ಕವಿಯ ಮನ ಮಿಡಿಯುವುದು ದಿನ ಹೊಸತನವ ಹುಡುಕುತ ಹೊಸ್ತಿಲಲಿ ಕಲ್ಪನೆಯ ಭಾವನೆಗಳು ಚಿಗುರೊಡೆದು ಹೊರ ಹೊಮ್ಮುತಿವೆ ಕಥೆ - ಕವನಗಳಾಗಿ ತನುವು ಕುಗ್ಗಿ ಬಾಗಿ ಮುದಿಯಾದರೂ ಮನಸ್ಸು ಚಿರ ಯೌವನದ ಚಿಲುಮೆಯಂತೆ ಪುಟಿದೇಳುವುವು ಕನಸಿನ...