ಸೂರ್ಯ ದೇವರೇ

ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ ಬೆಳಕೂಂತ ಮಾರ್‍ತಾನೆ ನೀವು ಎದ್ರೀಂದ ಕೂಡಲೇ...

ಇವನಿಗೇನು ಧಾಡಿ?

ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ...

ಆ ಸೂರ್ಯನೇ ಸರಿ

ನೀನೇ ನೋಡ್ತಿಯಲ್ಲ ಚಂದ್ರ ಹೊತ್ತಿಗೆ ಮುಂಚೆ ಏಳ್ತಾಳೆ ಎಷ್ಟು ಹೊತ್ತಿಗೋ ಮಲಗ್ತಾಳೆ ರೇಗ್ರಿದ್ರೆ ರೆಷ್ಟ್ ಗಿಷ್ಟ್ ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ ರೈಲು, ಬಸ್ಸು, ಲಾರಿ, ಯಾವುದಾದರೂ ಸರಿ ಹಗಲೂ ರಾತ್ರಿ ಬುಗುರಿ...

ಡಿಪ್ರೆಸ್ಸಿವ್ – ಮೇನಿಯಕ್ಕು

ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ ಒಂದಾಗಿರಬೇಕು, ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ ಆಲ್ಕೋಹಾಲಿಕ್ಕು, ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ ಹುಣ್ಣಿಮೆಗಳ ಮಧ್ಯೆ ತೊಳಲಾಡೋ ಅಬ್‌ನಾರ್ಮಲ್ ಡಿಪ್ರೆಸ್ಸಿವ್ - ಮೇನಿಯಕ್ಕು....

ಬಿ.ಡಿ.ಎ ಬುಲ್ಡೋಜರ್‍

ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್‍ ಈ ಸೂರ್ಯ. *****

ಬೇಡಾಂದ್ರು ಕೇಳಲ್ಲ

ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ *****