ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ. ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ. ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ ಉದಾಸೀನಮಾಡುವಂತದ್ದಲ್ಲ ಈ...
ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ ನಾನು ಹೆಚ್ಚೋ ಸೂರ್ಯ ಹೆಚ್ಚೋ? ಸೂರ್ಯ ಹೆಚ್ಚೋ ನಾನು ಹೆಚ್ಚೋ...? ಉತ್ತರಿಸಿ ಸಾಕಾಗಿದೆ. ನಿನ್ನನ್ನು ಬಿಡುವಂತಿಲ್ಲ ಬಿಡು ಈ ಹೆಚ್ಚುಗಾರಿಕೆಯ ಹುಚ್ಚು ಪಾಪ ನಿನಗೆ ಗೊತ್ತಿರೋದು...
ಚಂದ್ರ ನನಗೆ ನೀನೂ ಬೇಡ ಸೂರ್ಯನೂ ಬೇಡ ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ...
ಚಂದ್ರ ನನಗೆ ನಿನ್ನ ಈ ಬುದ್ಧಿ ಮಾತ್ರ ಹಿಡಿಸೋದಿಲ್ಲ ನೋಡು ಈಗ ಒಂದೆಂಟತ್ತು ದಿನದ ಹಿಂದೆ ದಿಲ್ಲಿಯಲ್ಲಿ ಸಿಕ್ಕಿದಾಗ ಪ್ರಧಾನಮಂತ್ರಿ ನೋಡ್ಕೋಂಡು ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ ಮುಖ ಗುಂಡಗೆ ಅರಳಿ ಹೋಗಿತ್ತು. ಇವತ್ತು...
ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ ನನ್ನ ಪ್ರಭಾವವೇನು ಈಗಲಾದರೂ ನಿಮಗೆ ಅರ್ಥವಾಯ್ತೇನು....
ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ. *****
ರಾತ್ರಿ ಬೆಳಗೂ ಕರಿಪರದೆಯ ಮುಂದೆ ಮಿಂಚುತ್ತಿದ್ದ ತಾರೆಯರು ಹಗಲು ನೀಲಿ ಪರದೆಯ ಹಿಂದೆ ನಿದ್ದೆ ಮಾಡ್ತಿದಾರೆ ಸಂಜೆಗೆ ಅವರವರ ಸೀನಿಗೆ ಸರಿಯಾಗಿ ಸದ್ದು ಮಾಡದೆ ಎದ್ದೆದ್ದು ಬರ್‍ತಾರೆ. *****