ಅಮೃತ ತರಂಗಿಣಿ

ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು ಬೆಳಕಿನ ಕಿರಣವು. ನನ್ನ ಜಲಧಿಯ ತುಂಬು...

ಬದುಕಿನ ಹಾಡು

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ್ದು, ಕೇಳುವರು-ಕೇಳಿದ್ದು,...

ತಮೋಹಾರಿ

ನನ್ನೆದೆಯ ಬಾಂದಳದ ಅರಿವಿನಾ ಜ್ಯೋತಿಯೇ ನೀ ಬೆಳಗು, ನಿನ್ನ ಬೆಳಕಿರಲೆನ್ನ ಒಳಗು-ಹೊರಗು, ದಿಕ್ ದಿಗಂತದ ಕಾಂತಿ ಎನ್ನ ಚೇತೋಹಾರಿ, ಬಾನ್ ಕಿರಣವಿಣುಕದಾ ಚಿತ್ತ ತಮೋಹಾರಿ, ಇರುಳಿರುಳ ಮರಳಿನೊಳು ಕುರುಡು-ಹುರುಡಾಗದಿರಲಿ, ಹಗಲಗಲ ಸಿರಿಧನದೊಳು ಬರಡು-ಬರಡಾಗದಿರಲಿ, ಈಜೋ...

ಗೂಡೆಲುಬು

ಏರಿ ಏರಿ ಮೇಲೇರುತ ನಭದಲಿ ಹಕ್ಕಿ ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ | ಶೈಶವ ಬಾಲ್ಯದ ಗೂಡನೆ ಮರೆತು, ಮೋಡದಲೆಯ ನೂಪುರದಲಿ ಕುಳಿತು, ಮುಪ್ಪನು ಕಂಡು ಜಗಿದು ಜರಿದು, ನಸು ನಗುತಿದೆ ಗರಿಗೆದರಿ |...

ಬನ್ನಿ ಕನಸುಗಳೆ ಬನ್ನಿ

ಬನ್ನಿ ಕನಸುಗಳೆ ಬನ್ನಿ ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ | ಮಣ್ಣಿನಲಿ ದಿನಕಟ್ಟೋ ಮಣ್ಣಣುಗರನು ಸಂತೈಸ ಬನ್ನಿ ಮಣ್ಣಲ್ಲಿ ಮಣ್ಣಾಗೋ ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ | ದುಡಿ-ದುಡಿದು ದಣಿ-ದಣಿವ ತನುಮನವನೋಲೈಸಲು ಬನ್ನಿ...

ವೈಶ್ವಿಕತೆಯಡೆಗೆ

ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ | ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು ನವ ಶತಮಾನದಲಿ ನವ ನೇಹದರುಣೋದಯ, ಇತಿಹಾಸ ಗುರುತಿಸಲು ಬಿಡ ದ್ವೇಷ ಹೆಜ್ಜೆಗಳ ವರ್ತಮಾನ ದೀಕ್ಷೆಯಲಿ...

ನಿವೇದನೆ

ಕಾರುಣ್ಯದಾ ಬೆಳಕೆ ಬಾ ಬೇಗ ಬಾ ನನ್ನೆದೆಯ ಬಾಂದಳವ ಬೆಳಗಿಸಲು ಬಾ ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು ಮುಗಿಲಗಲ ಜಗಕೆಲ್ಲ ರಸವೃಷ್ಟಿ ಸುರಿಸು, ರವಿ ಶಶಿ ತಾರಾಹೊಳಪನ್ನು ನಮ್ಮ ಕಣ್ಣುಗಳೊಳಗಿರಿಸು,...

ಅನಾದಿ

ಯಾವುದು ಮೊದಲೊ, ಮೊದಲಿಗ ರಾರೋ, ಭಾವವಿಸಂಗತ, ಅಲೇಖ್ಯ ನಂದನಕೆ, ಕೊನೆ ಎಲ್ಲಿಯದೊ, ಕೊನೆಯಿಸುವವರಾರೋ, ಭೂರಮೆ ಭಾಗ್ಯದ, ಬಾಂದಳದಂಗಳಕೆ, ಅಂಕುರವಾವುದೋ ಅಂದಣದ್ಹೇರಿಗೆ? ಅಂಕುಶವೆಲ್ಲಿಯೊ ಮುಂದಣ ಯಾನೆಗೆ? ನಿಃ ಶಬ್ದದಿ ದನಿಸಿದ ಇನಿದನಿಯಾವುದೊ, ಯುಗ-ಯುಗಾಂತರ ಜಾಲ-ಜಾಲದಲಿ, ಶಬ್ದ-ಶಬ್ದಾಬ್ದಿಯ...

ವಿಶ್ವ ಸಂಚಾರಿ

ನಿನ್ನದೀ ಜಗ ನಿನಗೆ ಬಲು ಸುಂದರ, ಎದೆಯೊಲವವರಳಿಸೋ ನೀ ಸಿರಿ ನೇಸರ ||ಪ|| ಅಂಬೆಗಾಲಿಗೆ ಮುನ್ನ ಜಗದೊಡೆಯಯೊಡತಿಯಽ ಸೊಗಸು, ಉರುಳು ಉರುಳತಲಲೆವ ಕುಸ್ತಿ ಪಟ್ಟುಗಳಽ ಬಿರಿಸು ||೧|| ಕೈ ಕಾಲ ಬಡಿದಾಟ ಚೆಲ್ವ ಚೆಲ್ಲಾಟವು,...

ಮರೀಚಿಕೆ

ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು ಅಳಿದಳಿದು ಶೂನ್ಯ ಮನದಲಿ ಕವಿದು |...