ಮಾತು ಎಲ್ಲರ ಸೊತ್ತು

ಬದುಕಿನ ಹೆಚ್ಚ ಹೆಚ್ಚಗಳ ಗೆಜ್ಜೆವುಲಿವಾಗಿ ಗಿಡಮರ ಪ್ರಾಣಿ ಪಕ್ಷಗಳ ಒಡನಾಟದ ಹಸಿವು ಹಂಬಲ ಬೇಟೆ ಬೇಟ ಹಿಗ್ಗು ಕೂಗುಗಳ ತೊದಲು ನುಡಿಯುತ್ತಾ ಗವಿ ಗುಡಿಸಲು ಹಳ್ಳಿ ಊರು ಪಟ್ಟಣಗಳಲ್ಲಿ ಬಯಲಾಟವಾಡುತ್ತಾ ಪಶುವನ್ನು ದುಡಿಮೆಗೆ ಹೂಡಿ...

ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ|| ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ...

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ|| ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು ಮುರುಕು ಗುಡಿಸಲಲ್ಲಿ ದೀಪ ಮಿಣುಕು...

ಲೆಕ್ಕ ಸಿಗುವುದಿಲ್ಲ

ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ ತಲೆಹಿಡುಕ ರಾಜಕಾರಣದ ವೇಷದಲ್ಲಿ ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ...

ಕಾಲ ಬಂದಿದೆ

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ|| ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧|| ಬೆಳಕನೆಲ್ಲ...

ತಾಯಂದಿರಿಗೆ

ತಾಯಂದಿರೇ ಹುಟ್ಟುತ್ತಲೇ ಯಾರೂ ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ ಪಡೆದುಕೊಂಡೇ ಬರುವುದಿಲ್ಲ ಹುಟ್ಟುತ್ತಲೇ ವೇದಾದಿಗಳು ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ ಹುಟ್ಟಿ ಬಂದ ಕುಲ ಕುಂದು ದೋಷ ವೃತ್ತಿಗಳೆಲ್ಲ ಶಿಲಾ ಶಾಸನವೇನಲ್ಲ ಇದನ್ನು ಬರೆದಿಟ್ಟುಕೊಳ್ಳಿ...

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ ಹೃದಯಗಳು ಮಿಡಿಯುತಿವೆ ಅಸಂಖ್ಯ ನಾಡಿ ತುಡಿಯುತಿವೆ ಅಸಂಖ್ಯ ನಾದ ಮೊಳಗುತಿವೆ ಅಸಂಖ್ಯ ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ ಇವು ಬರೀ ಕರಿಬಣ್ಣದ ಅಂಕು ಡೊಂಕು...

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ|| ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ|| ಕಂಡ...

ನಡುವಿನವರಿಗೆ

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ|| ಧರ್ಮ ಶಾಸ್ರ ಗ್ರಂಥ...

ಪ್ರಜಾರಾಜ್ಯದ ಅಣಕಾಟ

ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ   ||ಪ|| ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ ಪ್ರಜೆಗಳಿಂದಲೇ ನಡೆಯಲು ಬೇಕು ಪ್ರಜೆಗಳ ಹೆಸರಲಿ ಕೊಬ್ಬುವ ಜನರನು ಯಾವ ರೀತಿಯಲಿ ಕೊಲಬೇಕು ||೧|| ಓಟಿನ ಮುಂಚಿನ ಸೋಗು ನೋಡಿರೋ...