ಅಭಿಸಾರಿಕೆ

ಹೊರಟೆ ಎಲ್ಲಿಗೆ ಅಭಿಸಾರಿಕೆ ನಿರ್ಧಯಳೇ ಕಂದನ ಕರೆಗೆ ಬಿಂಕ ಬಿನ್ನಾಣವ ಉಟ್ಟು ಮುತ್ತು ರತ್ನವ ತೊಟ್ಟು ಹೊರಟೆ ಎಲ್ಲಗೆ ನೀ ಎಲ್ಲಿಗೆ? ಈ ಸೌಂದರ್ಯದ ಪ್ರಖರತೆ ಆಗಬಾರದೆ ಅತ್ಮದ್ದು ಹಿಂದೊಮ್ಮೆ ಹೊರಟಿದ್ದಳು ಅಕ್ಕ ದೂರಾಗಿಸಲು...

ನಾನು ನಾನೇ

ಬೊಬ್ಬಿಡುವ ಶರದಿ ನಾನಲ್ಲ ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ ಬಳ್ಳಿ ಕುಸುಮ ಕೋಮಲೆ ನಾನಲ್ಲ ನಾನು ನಾನೇ ಗೆಳೆಯ ನಾನು ನಾನೇ, ನಾನು ನಾನೇ ಮನದಾಳದ ಭಾವಗಳೆಲ್ಲ ಉರಿವ ಕೆಂಡವಲ್ಲ ಬೆಳದಿಂಗಳ ತಂಪೂ ಅಲ್ಲಾ...

ಬೊಗಸೆಯೊಳಗಿನ ಬಿಂದು

ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ...

ಒಗಟ ಬಿಡಿಸಿರೇ

ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ ಅಂದು, ಅಂತೆಯೇ ಮಾರಿದನೊಬ್ಬ ತನ್ನ ಸತಿಯ ನಡುಬೀದಿಯಲಿ ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು ಬಿಕರಿಗಿಟ್ಟ ವಸ್ತುವಿನಂತೆ ಕೊಟ್ಟಮಾತ ಉಳಿಸಿಕೊಳ್ಳಲು ಸತ್ಯದ ಕೀರ್ತಿಗಾಗಿ ಸತಿಯ ಮಾರಿ, ತನ್ನ ತಾ ಮಾರಿಕೊಂಡ ಹುಂಬ ಗಂಡ...

ನಿಂತು ಬಿಡೇ ನೀ ಹೀಗೆ

ಯಾರು ಕೊಟ್ಟಿದ್ದೆ ಶಾಪ? ಬರಿತಾಪ, ಪರಿತಾಪ ಧರ್ಮ ಕರ್ಮದ ಗೆರೆ ಎಳೆದವರಲ್ಲವೇ ಅನುಕೂಲ ಸಿಂಧು ಶಾಸ್ತ್ರಸಮ್ಮತ ಅವರಿಗವರದೆ ಒಮ್ಮತ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಒಡ್ಡಬೇಡ ಗೋಣು ಯಾರ ಕೈಲಿದೆ ಪರತಂತ್ರ ಶಕ್ತಮನಸ್ಸಿನೊಡತಿ...

ಪೆಟ್ಟಿಗೆ

ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ...

ವರ್ತುಲ

ಸುತ್ತಲೂ ಸುತ್ತುತ್ತಿದೆ ಸ್ವಾರ್ಥದ ವರ್ತುಲ ಸುತ್ತಿ ಸುತ್ತಿ ಮತ್ತೆ ಮತ್ತೆ ಪರಿಧೀಯಲ್ಲೇ ನಡೆದು ನಡೆದು ದಾರಿಯೇ ಸವೆಯದಾಗಿದೆ ಸವೆದ ಹಾದಿಯಲ್ಲಿಯೇ ಮತ್ತೆ ನಡೆಯುತ್ತಲೇ ಅಡಿಯಿರಿಸುತ್ತದೆ ಸ್ವಾರ್ಥದ ನಡಿಗೆ ತಾನು, ತನ್ನದರ ನಡುವೆಯೇ ಬಾಡಿ ಬಸವಳಿದ...

ಅರ್ಥವಾಗದವಳು

ಅವಳೋ ಆರ್ಭಟಿಸುವ ಸಿಡಿಲು ಇಳೆಗೆ ಸುರಿವ ಮಳೆನೀರು ಭೋರ್ಗರೆವ ಕಡಲು ತಿಳಿನೀಲ ಮುಗಿಲು ಚಾಚಿದರೆ ಬಾಹುಗಳಿಗೂ ಆಚೆ ಹತ್ತಿಕ್ಕಿದರೆ ಇಳೆಗೂ ಈಚೆ ಕಪ್ಪನೆ ಮಿರುಗುವ ತಿಮಿರ ಕಂಡು ಕಾಣದಿಹ ಅಂತರ ಮಂಜುಗೆಡ್ಡೆ ಸನಿಹ ದೂರಾದರೋ...

ಸಹಜ

ಬೇರಿಳಿಸಿ ಬೆಳೆಯುತ್ತಿದೆ ಬುಡ ಸಡಿಲವೆನ್ನುವ ಅರಿವಿಲ್ಲದೆ ಎಲ್ಲೋ ಮೊಳೆತು, ಚಿಗುರಿ ತಾಯ ಗಿಡವ ಮೀರಿ ಸಾರವೆಲ್ಲ ಹೀರಿ ಎತ್ತರವ ಏರಿ ಬೆಳೆಯುವನೆಂಬ ಹಮ್ಮು ಅದೆಷ್ಟು ಗಳಿಗೆ ಕರುಳ ಹರಿದು ನೆತ್ತರವಹರಿಸಿ ಬುಡಕಿತ್ತ ಬೇರು ಮತ್ಯಾವುದೋ...

ಭವದ ಹೊರೆ

ಕೇಶವೇ ವಸ್ತ್ರವೆಂದು ಅದನ್ನೆ ಮೈ ತುಂಬಾ ಹೊದ್ದು ಉಟ್ಟಿದ್ದೆಲ್ಲವ ಬಿಸುಟು ಹೊರಟೇಬಿಟ್ಟೆಯಲ್ಲೆ ಅಕ್ಕ ಮರೆಯಲು ಮನದಾಳದ ದುಃಖ ನಿನಗಾಗಿ ಅಲ್ಲಿದ್ದ ಚೆನ್ನ ಹುಡುಕಿ ಹೊರಟೆ ಅವನನ್ನೆ ಲೋಕದಿದಿರು ನೀ ಆದೆ ಭಿನ್ನೆ ಅಂಜಲಿಲ್ಲ, ಅಳುಕಲಿಲ್ಲ...