ನಾನು

ನಾ ನಾನು ಈ ಕಣ್ಣುಗಳ ಕತ್ತಲೆ ಬೆಳಕು ನೆಳಲಾಟದಲ್ಲಿ ಈ ಎದೆಯ ಮತ್ತು ಈ ಲಂಗದ ಸುತ್ತು ಏರಿಳಿತದಲ್ಲಿ ಸೆಳೆತದಲ್ಲಿ ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ ಮೌನದ ವಿಸ್ಮೃತಿಯ ಶೂನ್ಯದಲ್ಲಿ ಲಯ. *****

ಪೆಟ್ಟಿಗೆ

ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ...